ಮಳೆಯಿಂದಾಗಿ ಅನಧಿಕೃತ ಮನೆಗಳು ಬಿದ್ದರೂ 1.25 ಲಕ್ಷ ರುಪಾಯಿ ಪರಿಹಾರ ಕೊಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಳೆದ ಬಾರಿ 5 ಲಕ್ಷ ರುಪಾಯಿ ಪರಿಹಾರ ಕೊಡುತ್ತಾರೆ ಅಂತಾ ಅವರೇ ಮನೆ ಕೆಡವಿಕೊಂಡರು. ಕಳೆದ ಬಾರಿ ಪ್ರಭಾವ ಇದ್ದವರು 5 ಲಕ್ಷ ರುಪಾಯಿ ಪಡೆದಿದ್ದರು. ಇನ್ನುಳಿದವರು 1 ಲಕ್ಷ ರುಪಾಯಿ ಪಡೆದಿದ್ದರು. ಆದರೆ ಈ ಬಾರಿ ಮನೆ ಬಿದ್ದವರಿಗೆ ಪೂರ್ತಿ ಮನೆ ಕಟ್ಟಿ ಕೊಡುವ ಕೆಲಸ ಮಾಡುತ್ತೇವೆ ಎಂದರು.