ಕಳೆದ ಮೂರು ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ 31000 ಕ್ಕೂ ಹೆಚ್ಚು ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಅಧಿಕೃತ ಮಾಹಿತಿಯ ಪ್ರಕಾರ 2021 ಮತ್ತು 2024 ರ ನಡುವೆ ಮಧ್ಯಪ್ರದೇಶದಲ್ಲಿ 28,857 ಮಹಿಳೆಯರು ಮತ್ತು 2,944 ಹುಡುಗಿಯರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಹಾಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಗೃಹ ಸಚಿವ ಬಾಲಾ ಬಚ್ಚನ್ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಈ ಅಂಕಿ ಅಂಶಗಳನ್ನು ನೀಡಿದೆ. ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಪ್ರತಿ ದಿನ ಸರಾಸರಿ 28 ಮಹಿಳೆಯರು ಮತ್ತು 3 ಹುಡುಗಿಯರು ಕಾಣೆಯಾಗುತ್ತಿದ್ದಾರೆ. ಈ ಆತಂಕಕಾರಿ ಸಂಖ್ಯೆಯ ಹೊರತಾಗಿಯೂ, ಕೇವಲ 724 ನಾಪತ್ತೆ ಪ್ರಕರಣಗಳು ಮಾತ್ರ ಅಧಿಕೃತವಾಗಿ ದಾಖಲಾಗಿವೆ.
ಉಜ್ಜಯಿನಿಯಲ್ಲಿ ಕಳೆದ 34 ತಿಂಗಳಿನಲ್ಲಿ 676 ಮಹಿಳೆಯರು ನಾಪತ್ತೆಯಾಗಿದ್ದಾರೆ. ಇನ್ನೂ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಸಾಗರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಹೆಣ್ಣು ಮಕ್ಕಳು ಕಾಣೆಯಾಗಿದ್ದು, 245 ಪ್ರಕರಣಗಳು ದಾಖಲಾಗಿವೆ.
ಇಂದೋರ್ನಲ್ಲಿ 2384 ಮಹಿಳೆಯರು ಕಾಣೆಯಾಗಿದ್ದಾರೆ. ಇದು ರಾಜ್ಯದ ಎಲ್ಲಾ ಜಿಲ್ಲೆಗಿಂತ ಅತಿ ಹೆಚ್ಚು. ಇಂದೋರ್ನಲ್ಲಿ ಒಂದು ತಿಂಗಳಿನಲ್ಲಿ 479 ಮಹಿಳೆಯರು ನಾಪತ್ತೆಯಾಗಿದ್ದಾರೆ. ಆದರೆ 15 ಪ್ರಕರಣಗಳು ಮಾತ್ರ ದಾಖಲಾಗಿವೆ ಎಂದು ವರದಿ ತಿಳಿಸಿದ್ದಾರೆ.