ಇಂದೋರ್: ವಿಶ್ವ ಪರಿಸರ ದಿನದಂದು ಪ್ರಧಾನಿ ನರೇಂದ್ರ ಮೋದಿ ‘ತಾಯಿಯ ಹೆಸರಲ್ಲಿ ಒಂದು ಸಸಿ’ ನೆಡುವಂತೆ ಕರೆ ನೀಡಿದ ಭಾಗವಾಗಿ ಮಧ್ಯಪ್ರದೇಶದ ಇಂದೋರ್ನಲ್ಲಿ ಭಾನುವಾರ ಒಂದೇ ದಿನದಲ್ಲಿ 11 ಲಕ್ಷ ಸಸಿಗಳನ್ನು ನೆಟ್ಟು ವಿಶ್ವ ದಾಖಲೆ ನಿರ್ಮಿಸಲಾಗಿದೆ. ಈ ಮೊದಲು ಅಸ್ಸಾಂನಲ್ಲಿ ಒಂದು ದಿನ ದಲ್ಲಿ 9.26 ಲಕ್ಷಸಸಿ ನೆಟ್ಟು ದಾಖಲೆ ನಿರ್ಮಿಸಲಾಗಿತ್ತು. ಆ ದಾಖಲೆಯನ್ನು ಈಗ ಮುರಿಯಲಾಗಿದೆ. ಗಡಿ ಭದ್ರತಾ ಪಡೆಯ ರೇವತಿ ಫೈರಿಂಗ್ ರೇಂಜ್ ಮೈದಾನದಲ್ಲಿ ಗಿಡ ನೆಡಲಾಗಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, 11 ಲಕ್ಷ ಸಸಿ ನೆಡುವ ಮೂಲಕ ಇಂದೋರ್ನ ಜನ ವಿಶ್ವದಾಖಲೆ ನಿರ್ಮಿಸಲಿದ್ದಾರೆ’ ಎಂದು ಹೇಳಿದ್ದಾರೆ.