ಭಾರೀ ಮಳೆಯಿಂದಾಗಿ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದ ಹೊರಬದಿಯ ಗೋಡೆ ಕುಸಿದಿದ್ದು, ಹಲವರು ಸಿಲುಕಿರುವ ಆತಂಕವಿದೆ. ಅವಶೇಷಗಳ ಅಡಿಯಲ್ಲಿರುವ ವ್ಯಕ್ತಿಗಳ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ನಿನ್ನೆ ಸಂಜೆ ಇನ್ನೇನು ಆ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಆರತಿ ಬೆಳಗಬೇಕು. ಅಷ್ಟೊತ್ತಿಗಾಗಲೇ ವರುಣ ದೇವ ಎಂಟ್ರಿ ಕೊಟ್ಟು. ಈ ಅವಾಂತರವನ್ನ ಸೃಷ್ಟಿಸಿ ಬಿಟ್ಟಿದ್ದ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರೋ ಮಹಾರಾಜವಾಡ ಶಾಲೆಯ ಸಮೀಪವಿರುವ ಗಡಿಗೋಡೆಯ ಒಂದು ಭಾಗವು ಭಾರೀ ನೀರಿನ ಹರಿವಿನಿಂದ ಕುಸಿದಿದೆ. ಗೋಡೆ ಕುಸಿತದಲ್ಲಿ ಓರ್ವ ಪುರುಷ ಮತ್ತು ಓರ್ವ ಮಹಿಳೆ ಸಾವನ್ನಪ್ಪಿರೋದು ದೃಢವಾಗಿದೆ. ಗಾಯಗೊಂಡ ನಾಲ್ವರಿಗೆ ಚಿಕಿತ್ಸೆಗಾಗಿ ಇಂದೋರ್ನ ಆಸ್ಪತ್ರೆಗೆ ಕಳುಹಿಸಲಾಗಿದೆ. ತೀವ್ರ ನಿಗಾ ವಹಿಸಿರೋ ಚಿಕಿತ್ಸೆ ಮುಂದುವರೆದಿದೆ