ಎಸ್ಸಿ/ಎಸ್ಟಿ ಕೋಟಾದಿಂದ ಕೆನೆಪದರವನ್ನು ಹೊರಗಿಡುವ ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸಿ ಹಲವು ಸಂಘಟನೆಗಳು ಮತ್ತು ಗುಂಪುಗಳು ಆಗಸ್ಟ್ 21 ರಂದು ಭಾರತ್ ಬಂದ್ಗೆ ಕರೆ ನೀಡಿದ್ದವು. ಜಾರ್ಖಂಡ್, ಬಿಹಾರ, ಮಧ್ಯಪ್ರದೇಶ, ಕೇರಳ, ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಂದ್ ಪರಿಣಾಮ ಬೀರಿತ್ತು. ಮಹಾರಾಷ್ಟ್ರದಲ್ಲಿ ನಾಳೆ ಅಂದರೆ ಆಗಸ್ಟ್ 24 ರಂದು ರಾಜ್ಯಾದ್ಯಂತ ಬಂದ್ಗೆ ಕರೆ ನೀಡಲಾಗಿದೆ.
ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ ಆಗಸ್ಟ್ 24 ರಂದು “ಮಹಾರಾಷ್ಟ್ರ ಬಂದ್” ಗೆ ಕರೆ ನೀಡಿದೆ. ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ಅವರು ಆಗಸ್ಟ್ 24 ರಂದು ಎಲ್ಲಾ ಮಿತ್ರಪಕ್ಷಗಳು ಬಂದ್ನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಥಾಣೆ ಜಿಲ್ಲೆಯ ಬದ್ಲಾಪುರದ ಶಾಲೆಯೊಂದರಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದನ್ನು ವಿರೋಧಿಸಿ ಬಂದ್ಗೆ ಕರೆ ನೀಡಲಾಗಿದೆ. ಗುರುವಾರ, ಸೇನಾ ಯುಬಿಟಿಯ ನಾಯಕ ಉದ್ಧವ್ ಠಾಕ್ರೆ, ಮಹಿಳೆಯರ ಸುರಕ್ಷತೆಯ ಮಹತ್ವವನ್ನು ಎತ್ತಿ ತೋರಿಸುವುದು ಮತ್ತು ಸರ್ಕಾರವನ್ನು ಕ್ರಮಕ್ಕೆ ಒತ್ತಾಯಿಸುವುದು ಬಂದ್ನ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.