ಚಿಕನ್ ಶವರ್ಮಾ ತಿಂದು ಸಾವನ್ನಪ್ಪಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ 19 ವರ್ಷದ ಯುವಕನೊಬ್ಬ ಮನ್ಖುರ್ದ್ನ ನಗರದ ಪ್ರದೇಶದ ಸ್ಥಳಿಯ ಅಂಗಡಿಯಿಂದ ಚಿಕನ್ ಶವರ್ಮಾ ಸೇವಿಸಿದ್ದಾನೆ. ಕೆಲ ಹೊತ್ತಿನ ಬಳಿಕ ತೀವ್ರ ಆಸ್ವಸ್ಥಗೊಂಡಿದ್ದು, ಯುವಕನನ್ನು ಕೆಇಎಂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ. ಅಲ್ಲದೇ ಆತನೊಂದಿಗೆ ಚಿಕನ್ ಶವರ್ಮಾ ತಿಂದಿದ್ದ ಐವರು ತೀವ್ರ ಅಸ್ವಸ್ಥರಾಗಿದ್ದಾರೆ.
ಮೃತ ವ್ಯಕ್ತಿ ಪ್ರಥಮೇಶ್ ಬೋಕ್ಸೆ ಎಂದು ಗುರುತಿಸಲಾಗಿದ್ದು, ಮೇ 3 ರಂದು ತಮ್ಮ ಸ್ನೇಹಿತರೊಂದಿಗೆ ಚಿಕನ್ ಶವರ್ಮಾ ತಿನ್ನಲು ಹೋಗಿದ್ದರು. ಭೋಕ್ಸೆ ಎಂದಿನಂತೆ ಮನೆಗೆ ಮರಳಿದ್ದು, ಮರುದಿನ ಆತನಿಗೆ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ವಾಂತಿ ಸಂಜೆಯವರೆಗೂ ನಿಲ್ಲದ ಕಾರಣ, ಆತನ ಪೋಷಕರು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಭೋಕ್ಸೆ ಅವರನ್ನು ಕೆಇಎಂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು.
ಭೋಕ್ಸೆಗೆ ಕೆಲವು ಔಷಧಿಗಳನ್ನು ನೀಡಿ ಮನೆಗೆ ವಾಪಸ್ ಕಳುಹಿಸಲಾಗಿದ್ದು, ಆದಾಗ್ಯೂ ಚಿಕಿತ್ಸೆ ಹೊರತಾಗಿಯೂ ಮಂಗಳವಾರ ಬೆಳಗ್ಗೆ ಆತ ಸಾವನ್ನಪ್ಪಿದ್ದಾನೆ. ಹಾಳಾದ ಕೋಳಿ ಬಳಸಿದ್ದಕ್ಕಾಗಿ ಚಿಕನ್ ಶವರ್ಮಾ ಅಂಗಡಿ ನಡೆಸುತ್ತಿದ್ದ ಇಬ್ಬರು ಆರೋಪಿಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂಸು ಡಿಸಿಪಿ ರಜಪೂತ್ ತಿಳಿಸಿದ್ದಾರೆ.