288 ಸ್ಥಾನ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನ.20ರಂದು ನಡೆವೆ ಚುನಾವಣೆಗೆ 7995 ಅಭ್ಯರ್ಥಿಗಳು ಒಟ್ಟು 10,905 ನಾಮಪತ್ರ ಸಲ್ಲಿಸಿದ್ದಾರೆ. 2019ರಲ್ಲಿ 3,239 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಆಡಳಿತಾರೂಢ ಸರ್ಕಾರದಲ್ಲಿ ಪ್ರಮುಖ ಪಕ್ಷವಾಗಿರುವ ಬಿಜೆಪಿ ಅತಿ ಹೆಚ್ಚು 148 ಸ್ಥಾನಗಳಲ್ಲಿ ಕಣಕ್ಕೆ ಇಳಿದಿದ್ದರೆ, ವಿಪಕ್ಷ ಬಣದಲ್ಲಿ ಪ್ರಮುಖವಾಗಿರುವ ಕಾಂಗ್ರೆಸ್ 103ರಲ್ಲಿ ಕಣಕ್ಕೆ ಇಳಿದಿದೆ.
ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ 148, ಶಿವಸೇನೆ 80 (ಏಕನಾಥ್ ಶಿಂಧೆ), ಎನ್ಸಿಪಿ 53 (ಅಜಿತ್ ಬಣ) ಸ್ಥಾನದಲ್ಲಿ ಸ್ಪರ್ಧಿಸಿವೆ. ಮಿಕ್ಕ 8ರಲ್ಲಿ 5 ಸೀಟನ್ನು ಉಳಿದ ಮೈತ್ರಿ ಪಕ್ಷಗಳಿಗೆ ನೀಡಿದ್ದು, 3 ಸೀಟುಗಳ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಮತ್ತೊಂದೆಡೆ ವಿಪಕ್ಷ ಮಹಾವಿಕಾಸ ಆಘಾಡಿಯಿಂದ ಕಾಂಗ್ರೆಸ್ 103, ಶಿವಸೇನೆ (ಉದ್ಧವ್) 89 ಮತ್ತು ಎನ್ಸಿಪಿ (ಶರದ್) 87 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. 6 ಸೀಟುಗಳಲ್ಲಿ ಮಿಕ್ಕ ಮೈತ್ರಿ ಪಕ್ಷಗಳು ಸ್ಪರ್ಧೆ ಮಾಡುತ್ತಿವೆ. ಬಂಡಾಯ ಬಿಸಿ: ಆದರೆ ಈ ವರ್ಷ 150ಕ್ಕೂ ಹೆಚ್ಚು ಬಂಡಾಯ ಅಭ್ಯರ್ಥಿಗಳ ಕಣಃ ಇಳಿದಿರುವುದು ಅಧಿಕೃತ ಅಭ್ಯರ್ಥಿಗಳಿಗೆ ಭಾರೀ ತಲೆ ನೋವಾಗಿ ಪರಿಣಮಿಸಿದೆ. ಒಂದು ವೇಳೆ ಬಂಡಾಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದರೆ, ಬಹುಮು ಪಡೆಯುವ ಉಭಯ ಕೂಟದ ಆಸೆಗೂ ಭಾರೀ ಪೆಟ್ಟು ಬೀಳಬಹುದು ಎನ್ನಲಾಗಿದೆ.
ಇದನ್ನೂ ಓದಿ: LPG ಗ್ಯಾಸ್ ಬೆಲೆ ಬೆಂಗಳೂರಿನಲ್ಲಿ 61 ರೂ ಹೆಚ್ಚಳ!