ಲೋಕಸಭೆ ಚುನಾವಣೆಗೆ 3 ನೇ ಹಂತದ ಮತದಾನ ನಡೆದಿದ್ದು, ಮತಯಂತ್ರವನ್ನು ಮತಗಟ್ಟೆಗೆ ತರುವುದು ತಡವಾಗಿದ್ದರಿಂದ ಕೋಪಗೊಂಡ ಮತದಾರನೊಬ್ಬ ಪೆಟ್ರೋಲ್ ತಂದು ಇವಿಎಂಗೆ ಬೆಂಕಿ ಹಚ್ಚಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸಂಗೋಳ ತಾಲೂಕಿನ ಬಾದಲವಾಡಿಯಲ್ಲಿ ಘಟನೆ ನಡೆದಿದೆ. ಚುನಾವಣಾ ಅಧಿಕಾರಿಗಳು ಆ ಯುವಕನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಾಗಲವಾಡಿ ಗ್ರಾಮದಲ್ಲಿ ಯುವಕನೊಬ್ಬ ಇವಿಎಂಗೆ ಬೆಂಕಿ ಹಚ್ಚಿದ್ದಾನೆ. ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೂಡಲೇ ಅಲ್ಲಿದ್ದ ಸಿಬ್ಬಂದಿ ನೀರು ಹಾಕಿ ಬೆಂಕಿ ಹರಿಸಿದ್ದಾರೆ. ಸದ್ಯ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.