ದೇವಸ್ಥಾನದ ಡೋರ್ ಮ್ಯಾಟ್ ಮೇಲೆ ರಾಹುಲ್ ಗಾಂಧಿ ಫೋಟೋ. ಹಿಂದೂಗಳನ್ನು ಹಿಂಸಾಚಾರಿಗಳು ಎಂದು ಹೇಳಲು ನಿಮಗೆ ಎಷ್ಟು ಧೈರ್ಯ ಎಂಬ ಸಾಲುಗಳಿಂದ ಫೋಟೋಗಳನ್ನು ಶೇರ್ ಮಾಡಿಕೊಳ್ಳಲಾಗುತ್ತಿದೆ.
ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಿಂದೂಗಳ ಕುರಿತ ನೀಡಿದ ಹೇಳಿಕೆಯನ್ನು ಖಂಡಿಸಿ, ಮಹಾರಾಷ್ಟ್ರದ ಮಹಾಲಕ್ಷ್ಮಿ ದೇವಾಲಯದಲ್ಲಿ ಡೋರ್ ಮ್ಯಾಟ್ ಮೇಲೆ ರಾಹುಲ್ ಫೋಟೋ ಮುದ್ರಿಸಲಾಗಿದೆ. ದೇವಸ್ಥಾನದ ಡೋರ್ ಮ್ಯಾಟ್ ಮೇಲೆ ರಾಹುಲ್ ಗಾಂಧಿ ಫೋಟೋ ಮುದ್ರಣ ಮಾಡಲಾಗಿದ್ದು, ದೇಗುಲಕ್ಕೆ ಆಗಮಿಸುವ ಭಕ್ತಾದಿಗಳು ಇದರ ಮೇಲೆ ಕಾಲಿರಿಸಿ ಆಗಮಿಸುತ್ತಿದ್ದಾರೆ. ಸದ್ಯ ಡೋರ್ ಮ್ಯಾಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಹಿಂದೂಗಳನ್ನು ಹಿಂಸಾಚಾರಿಗಳು ಎಂದು ಹೇಳಲು ನಿಮಗೆ ಎಷ್ಟು ಧೈರ್ಯ ಎಂಬ ಸಾಲುಗಳಿಂದ ಫೋಟೋಗಳನ್ನು ಶೇರ್ ಮಾಡಿಕೊಳ್ಳಲಾಗುತ್ತಿದೆ. ಆದ್ರೆ ಇದು ಯಾವ ದೇವಸ್ಥಾನದ ಫೋಟೋಗಳು ಎಂಬುದರ ಬಗ್ಗೆ ತಿಳಿದು ಬಂದಿಲ್ಲ.