ದೇಶದ ಮಹರಾಷ್ಟ್ರ ಚುನಾವಣೆ ಸದ್ದು ಜೋರಾಗಿದೆ. ಮಹರಾಷ್ಟ್ರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನೆಡೆಸಿದ್ದಾರೆ. ದಿನನಿತ್ಯ ಮತದಾರರನ್ನ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಅಖಾಡಕ್ಕೆ ಇಳಿದಿದ್ದಾರೆ. ಇದೆಲ್ಲದರ ನಡುವೆ ಬಿಜೆಪಿ ಅಭ್ಯರ್ಥಿಯ ಆಸ್ತಿ ವಿವರ ದೇಶದ ಜನರನ್ನೇ ನಿಬ್ಬೆರಗಾಗುವಂತೆ ಮಾಡಿದೆ. ಹೌದು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ತಮ್ಮ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ. ಅದರಲ್ಲಿ ಘಾಟ್ಕೋಪರ್ ಪೂರ್ವ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪರಾಗ್ ಶಾ ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂದು ತಿಳಿದು ಬಂದಿದೆ.
ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಪರಾಗ್ ಶಾ 500 ಕೋಟಿ ರೂಪಾಯಿಗಳನ್ನು ಹೊಂದಿದ್ದರು, ಶಾಸಕರಾದ ಮೇಲೆ ಆಸ್ತಿ 6 ಪಟ್ಟು ಹೆಚ್ಚಾಗಿದೆ. ಇದರಿಂದ ದೇಶದ ಅತ್ಯಂತ ಶ್ರೀಮಂತ ಶಾಸಕ ಎಂದು ಗುರುತಿಸಿಕೊಂಡಿದ್ದ ಡಿ ಕೆ ಶಿವಕುಮಾರ್ ಅವರನ್ನೇ ಪರಾಗ್ ಶಾ ಮೀರಿಸಿದ್ದಾರೆ. ಡಿಕೆ ಶಿವಕುಮಾರ್ 2023 ರ ವಿಧಾನಸಭಾ ಚುನಾವಣೆ ವೇಳೆ ತಮ್ಮ ಆಸ್ತಿ ಘೋಷಣೆ ಮಾಡಿದ್ದರು. 1413 ಕೋಟಿ ರೂ. ಆದಾಯವನ್ನು ಹೊಂದಿದ್ದರು. ಡಿಕೆ ಶಿವಕುಮಾರ್ ನಂತರದಲ್ಲಿ ಗೌರಿಬಿದನೂರಿನ ಶಾಸಕ 1267 ಕೋಟಿ ಆದಾಯ ಘೋಷಿಸಿದ್ದು, ಗೋವಿಂದರಾಜ ನಗರದ ಶಾಸಕ ಪ್ರಿಯಾ ಕೃಷ್ಣ 1156 ಕೋಟಿ, ಹಾಗೂ ಆಂಧ್ರಪ್ರದೇಶದ ಸಿಎಂ ಎನ್ ಚಂದ್ರಬಾಬು ನಾಯ್ಡು 668 ಕೋಟಿ ಆದಾಯವನ್ನು ಘೋಷಣೆ ಮಾಡಿಕೊಂಡಿದ್ದರು.
ಘಾಟ್ಕೋಪರ್ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಪರಾಗ್ ಶಾ ಅವರು 2ನೇ ಬಾರಿಗೆ ಬಿಜೆಪಿ ಕಣಕ್ಕೆ ಇಳಿದಿದ್ದು, ಇವರ ಆಸ್ತಿ ಒಟ್ಟು 3,382 ಕೋಟಿ ರೂಪಾಯಿ ಇದೆ ಎಂದು ಘೋಷಣೆ ಮಾಡಿದ್ದಾರೆ. ಇದರಲ್ಲಿ 3,315 ಕೋಟಿ ಚರಾಸ್ತಿ ಮತ್ತು 67 ಕೋಟಿ ಸ್ಥಿರಾಸ್ತಿ ಇದೆ. ಈ 3,315 ಕೋಟಿ ಚರಾಸ್ತಿಯಲ್ಲಿ ಪರಾಗ್ ಶಾ ಅವರ ಹೆಸರಲ್ಲಿ 2,179 ಕೋಟಿ ಇದೆ. ಉಳಿದ 1,136 ಕೋಟಿ ಆಸ್ತಿ ಹೆಂಡತಿ ಹೆಸರಿನಲ್ಲಿದೆ. ಇದರ ಜೊತೆಗೆ ಕಾರು ಬಂಗಲೆ, ಚಿನ್ನ, ಬೆಳ್ಳಿ ಹಾಗೂ ಡೈಮಂಡ್ ಕೂಡ ಸೇರಿವೆ ಎಂದು ನಾಮಿನೇಷನ್ ವೇಳೆ ತಿಳಿಸಿದ್ದಾರೆ.