- ಹನುಮ ಧ್ವಜ ತೆರವುಗೊಳಿಸಿದ್ದನ್ನು ವಿರೋಧಿಸಿ ಹಿಂದೂ ಕಾರ್ಯಕರ್ತರಿಗೆ ಕೆರಗೋಡು ಪೊಲೀಸರಿಂದ ನೋಟಿಸ್
- ರೌಡಿ ಶೀಟ್ ತೆರೆಯುವ ಸಂಬಂಧ ಏಳು ದಿನದೊಳಗೆ ಉತ್ತರ ನೀಡುವಂತೆ ಸೂಚನೆ
- ಚಿಕ್ಕಬಳ್ಳಿಬಾಲು, ಕಾರ್ತಿಕ್, ಹರೀಶ್ ಅವರಿಗೆ ನೋಟಿಸ್ ಜಾರಿ
ಕೆರಗೋಡು ಗ್ರಾಮದಲ್ಲಿನ ಹನುಮ ಧ್ವಜ ತೆರವು ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಹನುಮ ಧ್ವಜ ತೆರವುಗೊಳಿಸಿದ್ದನ್ನು ವಿರೋಧಿಸಿ ಹಿಂದೂ ಕಾರ್ಯಕರ್ತರಿಗೆ ಕೆರಗೋಡು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ರೌಡಿ ಶೀಟ್ ತೆರೆಯುವ ಸಂಬಂಧ ಏಳು ದಿನದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ.
ಧ್ವಜ ಸ್ಥಂಭ ವಿಚಾರದಲ್ಲಿ ಅನ್ಯಕೋಮಿಯ ಜನರನ್ನು ಹೆದರಿಸುವುದು, ಬೆದರಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಚೋದನೆ ನೀಡಿದ್ದೀರಿ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರಂತರವಾಗಿ ಸಕ್ರೀಯವಾಗಿರುವುದರಿಂದ ಏಕೆ ನಿಮ್ಮ ಮೇಲೆ ರೌಡಿ ಶೀಟ್ ತೆರೆಯಬಾರದೆಂದು, ನಿಮ್ಮ ಸಮಜಾಯಿಸಿಯನ್ನು ಈ ನೋಟಿಸ್ ತಲುಪಿದ 7 ದಿನಗಳ ಒಳಗೆ ಠಾಣೆಗೆ ಹಾಜರಾಗಿ ಮಾಹಿತಿ ಸಲ್ಲಿಸಬೇಕು. ಕೆರಗೋಡು ಠಾಣೆ ಪೊಲೀಸರು ವಿಶ್ವ ಹಿಂದೂ ಪರಿಷತ್ನ ಮೈಸೂರು ಭಾಗದ ಸಹಕಾರ್ಯದರ್ಶಿ ಚಿಕ್ಕಬಳ್ಳಿಬಾಲು, ಕಾರ್ತಿಕ್, ಹರೀಶ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.