ಮಗನ ಸಾವಿನ ಸುದ್ದಿಯನ್ನ ಕೇಳಿದ ತಾಯಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವಂತಹ ಘಟನೆಯೊಂದು ನಡೆದಿದೆ. ಮಂಡ್ಯ ಬಳಿಯ ಮೆಟ್ಕಲ್ ಗ್ರಾಮದ ಕೃಷ್ಣಮೂರ್ತಿ ಎಂಬ 20 ವಯಸ್ಸಿನ ಯುವಕ ಅಪಘಾತದಲ್ಲಿ ಮರಣ ಹೊಂದಿದ್ದನು. ಈ ವಿಷಯವನ್ನು ತಿಳಿದ ತಾಯಿ ಮಹದೇವಮ್ಮ ಅವರು ಆಘಾತದಿಂದ ಕುಸಿದು ಬಿದ್ದಿದ್ದಾರೆ. ಬಿದ್ದವರು ಮತ್ತೆ ಏಳಲೇ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಗನ ಅಪಘಾತದ ಘಟನೆ ನಡೆದಿರುವುದು ಎರಡು ದಿನಗಳ ಹಿಂದೆ. ಅಂದರೆ ಡಿ.21 ರಂದು ನಡೆದಿದ್ದರೂ ಈ ವಿಷಯ ತಿಳಿದು ಬಂದದ್ದು ಡಿ.23 ರಂದು. ಬೈಕ್ ನಿಯಂತ್ರಣ ತಪ್ಪಿ ಕೃಷ್ಣ ಮೂರ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಈ ವಿಷಯ ತಾಯಿಗೇ ತಿಳಿಸಿರಲಿಲ್ಲ. ಆತ ಚಿಕಿತ್ಸೆ ಫಲಿಸದೇ ಮೃತನಾದನು. ಈ ವಿಷಯವನ್ನ ಗ್ರಾಮಸ್ಥರಿಂದ ತಿಳಿದ ಮಹದೇವಮ್ಮ ಕೂಡ ಕೊನೆಯುಸಿರೆಳೆದಿದ್ದಾರೆ.