ಮಂಡ್ಯ ಜಿಲ್ಲೆಯ ನಾಗಮಂಗಲದ ಬದರಿಕೊಪ್ಪಲಿನಲ್ಲಿ ನಿನ್ನೆ ರಾತ್ರಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ಮಾಡಿದ್ದರು. ಈ ಹಿನ್ನಲೆ ಪೊಲೀಸ್ ಠಾಣೆ ಎದುರು ಗಣಪತಿ ಮೂರ್ತಿ ನಿಲ್ಲಿಸಿ ಹಿಂದೂಗಳು ಪ್ರತಿಭಟನೆ ಕೂಡ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗಲಭೆ ಸಂಬಂಧ 150 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹೌದು, ಕರ್ತವ್ಯ ನಿರತ ಪಿಎಸ್ಐ B.J. ರವಿ ಅವರ ದೂರು ಆಧರಿಸಿ ಕೇಸ್ ದಾಖಲಾಗಿದೆ.
ಘಟನೆ ಹಿನ್ನಲೆ BNS 2023ರ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿರುವ ಪೊಲೀಸರು, 109, 115(2), 118(1), 121(1), 132, 189(2), 189(3), 189(4), 190,191(1), 191(2), 191(3), 324(4),324(5),326(F),326(G) BNS ಅಡಿಯಲ್ಲಿ ಕರ್ತವ್ಯ ನಿರತ ಪಿಎಸ್ಐ B.J. ರವಿ ದೂರು ಆಧರಿಸಿ ಕೇಸ್ ದಾಖಲು ಮಾಡಲಾಗಿದೆ. ಬದ್ರಿಕೊಪ್ಪಲು ಗ್ರಾಮದ ಕಿರಣ, ಭರತ ಬಿನ್ ಪುಟ್ಟರಾಜು, ಅಭಿಷೇಕ್, ಗೋವಿಂದ, ಅರುಣ, ಸಂಜಯ್, ಕೀರ್ತಂ ಬಿನ್ ಮೂರ್ತ, ಪೃಥ್ವಿ, ಹೇಮಂತ ಬಿನ್ ಲೇಟ್ ಕೇಶವಶೆಟ್ಟಿ, ಚಂದ್ರಶೇಖರ ಬಿನ್ ಲೇಟ್ ಸುಬ್ಬಾಶೆಟ್ಟಿ, ಶ್ರೀನಿವಾಸ್ ಬಿನ್ ಲೇಟ್ ಸುಬ್ರಾಶೆಟ್ಟಿ, ಶಿವು ಬಿನ್ ಕುಮಾರ, ರಾಮಚಂದ್ರ ಬಿನ್ ನಂಜಪ್ಪ, ಹರೀಶ ಬಿನ್ ಕುಮಾರ್, ದಿವಾಕರ ಬಿನ್ ಲೇಟ್ ಅಂಜನಮೂತರ್ ನಾಗಮಂಗಲ ಟೌನ್ನ ಮೇಗಲಕೇರಿಯ ವಿನಯ್ ಅಲಿಯಾಸ್ ಡಾಗ್ ವಿನಿ, ಮಾರಿಗುಡಿ ಸರ್ಕಲ ಪ್ರವೀಣ್ ಕುಮಾರ್, ಕೆ.ಎಸ್.ಟಿ ದೇವಸ್ಥಾನದ ಹಿಂಭಾಗದ ಮನೆಯ ಸುನೀಲ್, ಮೇಗಲಕೇರಿ ಸತೀಶ ಅಲಿಯಾಸ್ ಹಂಡೆ ಮತ್ತು ಇತರೆ 100 ರಿಂದ 150 ಜನರು ಪಟಾಕಿಯನ್ನು ಸಿಡಿಸಿ ಡ್ಯಾನ್ಸ್ ಮಾಡಿಕೊಂಡು ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ.