ಮಂಗಳೂರಿನ ಕೋಟೆಕಾರ್ ಬ್ಯಾಂಕ್ ದರೋಡೆ ಆರೋಪಿಯ ಮೇಲೆ ಶೂಟ್ ಔಟ್ ಆಗಿದೆ. ಕರ್ನಾಟಕ- ಕೇರಳ ಗಡಿ ಭಾಗದ ತಲಪಾಡಿಯ ಅಲಂಕಾರು ಗುಡ್ಡದಲ್ಲಿ ದರೋಡೆಕೋರನ ಮೇಲೆ ಶೂಟೌಟ್ ನಡೆದಿದೆ. ದರೋಡೆಯ ಪ್ರಮುಖ ಆರೋಪಿ ಕಣ್ಣನ್ ಮಣಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ತಮಿಳುನಾಡಿನಿಂದ ಆರೋಪಿಗಳನ್ನು ಮಂಗಳೂರಿಗೆ ಕರೆ ತಂದು ಸ್ಥಳ ಮಹಜರು ವೇಳೆ ಘಟನೆ ನಡೆದಿದೆ. ಸ್ಥಳ ಮಹಜರು ವೇಳೆ ಆರೋಪಿ ಕಣ್ಣನ್ ಮಣಿ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಎಂದು ತಿಳಿದುಬಂದಿದೆ.
ನಿನ್ನೆ ತಮಿಳುನಾಡಿನ ತಿರುವನ್ವೇಲಿ ಪದ್ಮನೇರಿ ಗ್ರಾಮವೊಂದರಲ್ಲಿ ಆರೋಪಿಗಳನ್ನ ವಶಕ್ಕೆ ಪಡೆದಿದ್ದರು ಪೊಲೀಸರು. ಆರೋಪಿಗಳನ್ನ ಮಂಗಳೂರಿನ ಕೆ.ಸಿ.ರೋಡ್ ಗೆ ಸ್ಥಳ ಮಹಜರಿಗೆ ಕರೆತರ್ತಾ ಇದ್ದರು. ಸದ್ಯ ದೇರಳಟ್ಟೆಯ ಖಾಸಗಿ ಆಸ್ಪತ್ರೆಗೆ ಆರೋಪಿ ಕಣ್ಣನ್ ಮಣಿಯನ್ನ ದಾಖಲು ಮಾಡಲಾಗಿದೆ. ಆರೋಪಿ ಕಣ್ಣನ್ ಮಣಿ ಮೇಲೆ ಸಿಸಿಬಿ ಇನ್ಸ್ ಪೆಕ್ಟರ್ ರಫೀಕ್ ರಿಂದ ಫೈರಿಂಗ್ ಆಗಿದೆ.
ಕೋಟೆಕಾರ್ ಬ್ಯಾಂಕ್ ದರೋಡೆ ಆರೋಪಿ ಮೇಲೆ ಶೂಟ್ ಔಟ್ ಆಗಿದ್ದು, ಘಟನೆಯಲ್ಲಿ ಉಳ್ಳಾಲ ಇನ್ಸ್ ಪೆಕ್ಟರ್ ಸೇರಿ ಮೂವರಿಗೆ ಗಾಯವಾಗಿದೆ. ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ, ಸಿಬ್ಬಂದಿ ನಿತಿನ್ ಹಾಗೂ ಅಂಜನಪ್ಪಗೆ ಗಾಯಗಳಾಗಿವೆ.
ಇಂದು ಸಂಜೆ 4.20ರ ವೇಳೆಯಲ್ಲಿ ತಲಪಾಡಿ ಅಲಂಗಾರು ಗುಡ್ಡೆ ಬಳಿ ಪೊಲೀಸರು ಕರೆ ತಂದಿದ್ದರು. ಈ ವೇಳೆ ಬಿಯರ್ ಬಾಟಲಿಯಿಂದ ಸಿಸಿಬಿ ಸಿಬ್ಬಂದಿ ಅಂಜನಪ್ಪ ಹಾಗೂ ಉಳ್ಳಾಲ ಠಾಣೆ ಸಿಬ್ಬಂದಿ ನಿತಿನ್ ಮೇಲೆ ದಾಳಿ ಮಾಡಿದ್ದಾರೆ. ತಡೆಯಲು ಬಂದ ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ಮೇಲೂ ದಾಳಿ ನಡೆಸಿದ್ದಾರೆ ಖದೀಮರು.
ಆಗ ಸ್ಥಳದಲ್ಲೇ ಇದ್ದ ಸಿಸಿಬಿ ಇನ್ಸ್ ಪೆಕ್ಟರ್ ರಫೀಕ್ ರಿಂದ ಕಣ್ಣನ್ ಕಾಲಿಗೆ ಫೈರಿಂಗ್ ಆಗಿದೆ. ಕೆ.ಸಿ.ರೋಡ್ ನ ಕೋಟೆಕಾರು ಬ್ಯಾಂಕ್ ಗೆ ಕೆಲವೇ ಕಿ.ಮೀ ದೂರದಲ್ಲಿರೋ ನಿರ್ಜನ ಪ್ರದೇಶದಲ್ಲಿ ಈ ಒಂದು ಘಟನೆ ನಡೆದಿದೆ. ಕರ್ನಾಟಕ- ಕೇರಳ ಗಡಿ ಭಾಗದ ತಲಪಾಡಿಯ ಅಲಂಕಾರು ಗುಡ್ಡದಲ್ಲಿ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:
https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: