ಮಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದೆ. ನಾಪತ್ತೆಯಾಗಿದ್ದ ಹಿಂದೂ ಯುವತಿಯು ನಟೋರಿಯಸ್ ಮುಸ್ಲಿಂ ಯುವಕನ ಜೊತೆ ಇರುವುದು ಪತ್ತೆಯಾಗಿದೆ. ಪಾಂಡೇಶ್ವರ ಠಾಣೆ ಪೊಲೀಸರು ಪತ್ತೆ ಮಾಡಿದ್ದು, ಇದೀಗ ಆಕೆಯ ಪೋಷಕರು ಇದೊಂದು ಲವ್ ಜಿಹಾದ್ ಎಂದು ಆರೋಪಿಸಿದ್ದಾರೆ.
ನಾಪತ್ತೆಯಾಗಿದ್ದ ಹಿಂದೂ ಯುವತಿ ನಟೋರಿಯಸ್ ಮುಸ್ಲಿಂ ಯುವಕನ ಜತೆ ಇರುವುದು ಪತ್ತೆಯಾಗಿದೆ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿಂದೂ ಯುವತಿ ಕಾಣೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ಕಾರ್ಯಚರಣೆ ನಡೆಸಿದ ಪಾಂಡೇಶ್ವರ ಠಾಣಾ ಪೊಲೀಸರು, ನಾಪತ್ತೆಯಾಗಿದ್ದ ಯುವತಿಯನ್ನು ಪತ್ತೆ ಮಾಡಿದ್ದಾರೆ. ಆದ್ರೆ, ಆಕೆ ನಟೋರಿಯಸ್ ಮುಸ್ಲಿಂ ಯುವಕ ಮಹಮ್ಮದ್ ಅಶ್ಪಕ್ ಜೊತೆ ಇದ್ದಾಳೆ. ಮಹಮ್ಮದ್ ಅಶ್ಪಕ್ ನಟೋರಿಯಸ್ ಹಿನ್ನಲೆ ಹೊಂದಿದವನು ಎಂದು ತಿಳಿದುಬಂದಿದೆ. ಮಹಮ್ಮದ್ ಅಶ್ಪಕ್ ಈಗಾಗಲೇ ಒಂದು ಮದುವೆಯಾಗಿದ್ದು, ಈತನ ವಿರುದ್ಧ ಕಾಸರಗೋಡು ವಿದ್ಯಾನಗರ ಠಾಣೆಯಲ್ಲಿ 8 ಕ್ರಿಮಿನಲ್ ಪ್ರಕರಣಗಳು ಇವೆ.