ಬಾಲಿವುಡ್ನ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ಮತ್ತು ಸಲ್ಲು ಭಾಯ್ ಎಂದೇ ಕರೆಸಿಕೊಳ್ಳುವ ಸಲ್ಮಾನ್ ಖಾನ್ 1988 ರಲ್ಲಿ ʻಬೀವಿ ಹೊ ತೊ ಏಸಿʼ ಎಂಬ ಸಿನಿಮಾದ ಮೂಲಕ ಸಹ ನಟನಾಗಿ ಅಭಿನಯ ಪ್ರಾರಂಭ ಮಾಡಿದರು. ಮತ್ತು 80 ರ ದಶಕದಲ್ಲಿ ಮೈನೆ ಪ್ಯಾರ್ ಕಿಯಾ ಅನ್ನುವ ಸಿನಿಮಾ ಮೂಲಕ ನಾಯಕನಟನಾಗಿ ಗುರುತಿಸಿಕೊಂಡರು. ನಂತರದಲ್ಲಿ ಬಾಲಿವುಡ್ನ ಖ್ಯಾತ ನಟಿಯಾದ ಐಶ್ವರ್ಯ ರೈ ಅನ್ನು ಪ್ರೀತಿಸಿದ್ದರು. ಆದರೆ ಐಶ್ವರ್ಯ ಅಭಿಷೇಕ್ ಬಚ್ಚನ್ನನ್ನು ವಿವಾಹವಾದರು . ಇದೀಗ ಸಲ್ಮಾನ್ ಖಾನ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ತನ್ನ ತಂಗಿ ಮನೆಯಲ್ಲಿ ತಮ್ಮ 59ನೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿರೋ ಸಲ್ಮಾನ್ ಖಾನ್, ಈ ವರ್ಷವೂ ಸಹ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಆಗಿಯೇ ಉಳಿದುಕೊಂಡಿದ್ದಾರೆ.
ಇನ್ನು ಬರ್ತ್ ಡೇ ವಿಶೇಷ ತನ್ನ ಫ್ಯಾನ್ಸ್ ಗೆ ಬಹುನಿರೀಕ್ಷಿತ ಸಿಕಂದರ್ ಚಿತ್ರದ ಟೀಸರ್ ನ ಗಿಫ್ಟ್ ನೀಡೋದಾಗಿ ಪ್ರಾಮಿಸ್ ಮಾಡಿದ್ರು ಭಾಯಿಜಾನ್. ಸಲ್ಮಾನ್ ಖಾನ್ ಜೊತೆ ನಿರ್ದೇಶಕ ಎಆರ್ ಮುರುಗದಾಸ್ ಹಾಗೂ ನಾಯಕನಟಿ ರಶ್ಮಿಕಾ ಮಂದಣ್ಣ ಕೂಡ ಇಂದು ಟೀಸರ್ ಲಾಂಚ್ ಆಗಲಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆದರೆ ಈಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆ ಸಿಕಂದರ್ ಟೀಸರ್ ರಿಲೀಸ್ ನಾಳೆಗೆ ಪೋಸ್ಟ್ ಪೋನ್ ಮಾಡಿದ್ದಾರೆ ನಟ ಸಲ್ಮಾನ್ ಖಾನ್. ಇದು ದೇಶದ ಮಾಜಿ ಪ್ರಧಾನಿ ಮಂತ್ರಿಗಳಿಗೆ ಸೂಪರ್ ಸ್ಟಾರ್ ನೀಡ್ತಿರೋ ಗೌರವವೂ ಹೌದು. ಅಂದಹಾಗೆ ಸಲ್ಲು ಫ್ಯಾನ್ಸ್ ಗೆ ಟೀಸರ್ ಬಾರದೇ ಇರೋದು ನಿರಾಸೆ ತರಿಸಿದ್ರೂ ಸಹ, ಸಲ್ಲು ತಗೊಂಡ ನಿರ್ಧಾರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಇನ್ನು ಸಿಕಂದರ್ ಸಿನಿಮಾ 2018ರಲ್ಲಿ ತೆರೆಕಂಡ ತಮಿಳಿನ ಬ್ಲಾಕ್ ಬಸ್ಟರ್ ಹಿಟ್ ಸರ್ಕಾರ್ ಚಿತ್ರದ ರಿಮೇಕ್. ಮೂಲ ನಿರ್ದೇಶಕ ಎಆರ್ ಮುರುಗದಾಸ್ ಅವರೇ ಸಿಕಂದರ್ ಗೂ ಆ್ಯಕ್ಷನ್ ಕಟ್ ಹೇಳ್ತಿದ್ದು, ಇದೊಂದು ಪೊಲಿಟಿಕಲ್ ಎಂಟರ್ ಟೈನರ್ ಆಗಿರಲಿದೆ.
ದೇಶದ ಮಾಜಿ ಪ್ರಧಾನಿ ಮಂತ್ರಿಗಳಿಗೆ ಸ್ಟಾರ್ ನಟ ಸಲ್ಮಾನ್ ಖಾನ್ ನೀಡುತ್ತಿರುವ ಗೌರವದಿಂದಾಗಿ ತಮ್ಮ ಚಿತ್ರದ ಟೀಸರ್ ನೀಡುವುದನ್ನು ಪೋಸ್ಟ್ಪೋನ್ ಮಾಡಿಕೊಂಡಿದ್ದಾರೆ.