- ಸೌದಿ ಅರೇಬಿಯಾದಲ್ಲಿ ಬಿಸಿಲಿನ ತಾಪಮಾನ ಹೆಚ್ಚಳ
- ಹಜ್ ಯಾತ್ರಿಕರ ಸಾವಿನ ಸಂಖ್ಯೆ 1,301ಕ್ಕೆ ಏರಿಕೆ
ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾದ ಮೆಕ್ಕಾಕ್ಕೆ ತೆರಳಿದ ಯಾತ್ರಾರ್ಥಿಗಳಿಗೆ ಬೇಸಿಗೆಯ ಬಿಸಿಲು, ಬಿಸಿಗಾಳಿಯ ಹೊಡೆತವು ಮಾರಣಾಂತಿಕವಾಗಿ ಪರಿಣಮಿಸಿದೆ. ಹಜ್ ಯಾತ್ರೆಯ ಸಮಯದಲ್ಲಿ 1,301ಮಂದಿ ಮೃತಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾ ಭಾನುವಾರ ಹೇಳಿದೆ. ಬಿಸಿಲಿನ ತಾಪಮಾನವು ಇದಕ್ಕೆ ಕಾರಣ ಎಂದು ತಿಳಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸೌದಿ ಸರ್ಕಾರ, “ಈ ವರ್ಷ ಶಾಖದ ಒತ್ತಡದಿಂದ ಹಲವು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಸಾವಿನ ಸಂಖ್ಯೆ 1,301ಕ್ಕೆ ತಲುಪಿದೆ. ಇನ್ನು ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆʼʼ ಎಂದು ಮಾಹಿತಿ ನೀಡಿದೆ. ʼʼಮೃತಪಟ್ಟವರಲ್ಲಿ ಬಹುತೇಕರು ಅಂದರೆ ಶೇ. 83ರಷ್ಟು ಮಂದಿ ಹಜ್ ಮಾಡಲು ಅರ್ಹರಾಗಿರಲಿಲ್ಲ. ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಂಡು ಮೈಲಿಗಟ್ಟಲೆ ನಡೆದಿದ್ದಾರೆ. ಇದರಿಂದ ಹೆಚ್ಚಿನ ಸಾವು ಸಂಭವಿಸಿದೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.