ರಾಜ್ಯದಲ್ಲಿ ದಿನೇ ದಿನೇ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗುತ್ತಿದ್ದು, ಮೈಕ್ರೋ ಫೈನಾನ್ಸ್ ವಿರುದ್ಧ ಕೇಳಿ ಬಂದ ಸಾಲು, ಸಾಲು ದೂರುಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಮೈಕ್ರೋ ಫೈನಾನ್ಸ್ ಕಿರುಕುಳವನ್ನ ತಡೆಗಟ್ಟಲು ಕೂಡಲೇ ಸುಗ್ರಿವಾಜ್ಞೆ ಮೂಲಕ ಕಾನೂನು ಜಾರಿಗೊಳಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮೈಕ್ರೋ ಫೈನಾನ್ಸ್ ದಾದಾಗಿರಿ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಇವತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪದಾಧಿಕಾರಿಗಳು, ಆರ್ಬಿಐ ಸಂಸ್ಥೆ, ನಬಾರ್ಡ್ ಅಧಿಕಾರಿಗಳು ಜೊತೆಗೆ ಕಂದಾಯ, ಸಹಕಾರಿ, ಗೃಹ ಇಲಾಖೆ, ಗೃಹ ಸಚಿವರು, ಫೈನಾನ್ಸ್ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಮಹತ್ವದ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾವು ಹೊಸ ಕಾನೂನು ಮಾಡ್ತೀವಿ. ಸಾಲ ಪಡೆಯುವರ ರಕ್ಷಣೆಗೆ ಹೊಸ ಕಾಯ್ದೆ ಮಾಡುತ್ತಾ ಇದ್ದೇವೆ. ಪರವಾನಿಗೆ ಇಲ್ಲದ ಸಾಲ ಯಾರು ನೀಡಬಾರದು. ಪ್ರತಿ ಜಿಲ್ಲೆಯಲ್ಲಿ ಸಹಾಯವಾಣಿ ಆರಂಭ ಮಾಡ್ತೀವಿ. ಅಲ್ಲಿ ದೂರು ನೀಡಿದರೆ ಪೊಲೀಸರು ತನಿಖೆ ನಡೆಸ್ತಾರೆ. ನಿಯಮ ಉಲ್ಲಂಘನೆ ಅದರೆ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸುತ್ತಾರೆ.
ಕಾನೂನು ರೀತಿ ಕ್ರಮ ತೆಗೆದುಕೊಳ್ಳಲು ತೀರ್ಮಾನ ಮಾಡಿದ್ದೇವೆ. ನಾವು ಹೊಸ ಕಾನೂನು ಮಾಡಬೇಕು ಅಂತ ಇದ್ದೀವಿ. ಅದನ್ನ ಕೊಡಲೇ ಮಾಡ್ತೀವಿ. ಆಂಧ್ರಪ್ರದೇಶ ಬೇರೆ ರಾಜ್ಯಗಳ ಕಾನೂನು ನೋಡಿ ಸುಗ್ರೀವಾಜ್ಞೆ ಮೂಲಕ ಕೂಡಲೇ ಕಾನೂನು ಮಾಡ್ತೀವಿ. ಸಾಲ ಕೊಡುವುದು, ವಸೂಲಿ ಮಾಡುವುದು ತಪ್ಪಲ್ಲ. ಆದರೆ RBI ನಿಯಮಗಳನ್ನು ಪಾಲನೆ ಮಾಡಬೇಕು. ಕಾನೂನು ಏನು ಹೇಳದಕ್ಕಿಂತ ಹೆಚ್ಚಿನ ಬಡ್ಡಿ ವಸೂಲಿ ಮಾಡಬಾರದು. ಸಂಜೆ 5 ಗಂಟೆ ಮೇಲೆ ಸಾಲ ವಸೂಲಿಗೆ ಹೋಗಬಾರದು. ಸಾಲ ವಸೂಲಿಗೆ ಹೊರ ಗುತ್ತಿಗೆಯಲ್ಲಿ ರೌಡಿಗಳು, ಗೂಂಡಾಗಳಿಗೆ ಕೊಡಬಾರದು. ನಿಯಮಗಳನ್ನ ಯಾರು ಉಲ್ಲಂಘನೆ ಮಾಡುತ್ತಾರೆ ಅವರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ.
ಅಸಲಿಗಿಂತ ಬಡ್ಡಿ ಜಾಸ್ತಿ ವಸೂಲಿ ಮಾಡಬಾರದು. ವಸೂಲಿ ಸ್ಥಗಿತ ಮಾಡಿ ಅಂತ ಹೇಳೋಕೆ ಬರಲ್ಲ. ಆದರೆ ಕಿರುಕುಳ ಕೊಟ್ಟವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ತಕ್ಷಣವೇ ಸುಗ್ರೀವಾಜ್ಞೆ ಜಾರಿಗೆ ತರುತ್ತೇವೆ. ಸಾಲವನ್ನು ಬಲತ್ಕಾರದಿಂದ, ಗೂಂಡಾಗಳನ್ನ ಬಳಸೋದು, ಹೆದರಿಸಿ ಸಾಲ ವಸೂಲಿ, ಅವಮಾನ ಮಾಡಿದ್ರೆ ಪೊಲೀಸಿನವರು ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc