ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ದಾಖಲೆಯ 7ನೇ ಬಜೆಟ್ ಮಂಡಿಸುತ್ತಿದ್ದಾರೆ. 2024ರ ಕೇಂದ್ರ ಬಜೆಟ್ನಲ್ಲಿ ಎಲ್ಲಾ ವಲಯಗಳಿಗೂ ಒತ್ತು ನೀಡಲಾಗಿದೆ. ಪ್ರಮುಖವಾಗಿ ನರೇಂದ್ರ ಮೋದಿ ಸರ್ಕಾರ ಈ ಬಾರಿ ಯುವಸಮುದಾಯಕ್ಕೆ ಆದ್ಯತೆ ನೀಡಿದ್ದು, ಯುವ ಜನರಿಗೆ ಉದ್ಯೋಗಕ್ಕಾಗಿ 5 ಹೊಸ ಸ್ಕೀಮ್ಗಳನ್ನು ಘೋಷಣೆ ಮಾಡಿದೆ.
2024ರ ಬಜೆಟ್ ಹೈಲೈಟ್ಸ್ ಏನು?
ಯುವ ಜನರಿಗೆ ಉದ್ಯೋಗಕ್ಕಾಗಿ 5 ಹೊಸ ಸ್ಕೀಮ್ಗಳು
4 ವರ್ಷಗಳ ಪಿಎಫ್ ಬೆಂಬಲದ ಸ್ಕೀಮ್ಗಳು ಘೋಷಣೆ
ಉದ್ಯೋಗದಾತರಿಗೆ ನೆರವು ನೀಡಲು PF ಬೆಂಬಲ ಸ್ಕೀಮ್
ಎಂಪ್ಲಾಯ್ಮೆಂಟ್ ಲಿಂಕ್ಡ್ ಸ್ಕೀಮ್ಗಳು ಘೋಷಣೆ
1 ಸಾವಿರ ಇಂಡಸ್ಟ್ರಿಯಲ್ ತರಬೇತಿ ಕೇಂದ್ರಗಳ ಉನ್ನತೀಕರಣ
20 ಲಕ್ಷ ಯುವ ಜನರಿಗೆ ಕೌಶಲ್ಯ ತರಬೇತಿ ನೀಡಲು ಯೋಜನೆ
ಮಹಿಳೆಯರಿಗಾಗಿ ವಿಶೇಷ ಕೌಶಲ್ಯ ತರಬೇತಿ ಕಾರ್ಯಕ್ರಮಗಳು
10 ಲಕ್ಷದವರೆಗೆ ಉನ್ನತ ಶಿಕ್ಷಣಕ್ಕೆ ಎಜುಕೇಷನ್ ಲೋನ್
ಸರ್ಕಾರಿ ಸೌಲಭ್ಯವನ್ನು ಪಡೆಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ
ವಾರ್ಷಿಕ 1 ಲಕ್ಷ ವಿದ್ಯಾರ್ಥಿಗಳಿಗೆ ಶೇ.3ರಷ್ಟು ಬಡ್ಡಿ ದರದಲ್ಲಿ ಸಾಲ