ಪಾಕಿಸ್ತಾನದಲ್ಲಿ ಇತ್ತೀಚೆಗೆ ಮೊದಲ ಪ್ರಕರಣ ದೃಢಪಟ್ಟ ನಂತರ ಸಿಡುಬಿನಂತೆಯೇ ರೋಗಲಕ್ಷಣಗಳನ್ನು ಹೊಂದಿರುವ ವೈರಸ್ ಸೋಂಕಾದ ಎಂಪಾಕ್ಸ್ ಅಥವಾ ಮಂಕಿಪಾಕ್ಸ್ ನ ಬಗ್ಗೆ ಜನರ ಆತಂಕ ಹೆಚ್ಚಾಗಿದೆ. ಪಾಕಿಸ್ತಾನದಿಂದ ಅನೇಕ ಜನರು ವಲಸೆ ಬರುವುದರಿಂದ ಶೀಘ್ರದಲ್ಲೇ ಭಾರತದಲ್ಲಿಯೂ ಮಂಕಿಪಾಕ್ಸ್ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮತ್ತು ಮಾನಿಟರಿಂಗ್ ಶಿಷ್ಠಾಚಾರಗಳನ್ನು ಶೀಘ್ರದಲ್ಲೇ ಜಾರಿಗೆ ತರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನ ನಿಲ್ದಾಣಗಳು ಎಂಪಾಕ್ಸ್ಗೆ ಸೋಂಕಿನ ಪ್ರಮುಖ ನೆಲೆಯಾಗಿರುತ್ತವೆ. ಇಲ್ಲಿ ದೇಶ ವಿದೇಶಗಳಿಂದ ನಿತ್ಯವೂ ಸಾವಿರಾರು ಜನರು ಬಂದು ಹೋಗುತ್ತಿರುತ್ತಾರೆ. ಮಂಕಿಪಾಕ್ಸ್ ಪೀಡಿತ ಪ್ರದೇಶಗಳಿಂದ ಭಾರತಕ್ಕೆ ವೈರಸ್ ಹರಡುವುದನ್ನು ಪತ್ತೆಹಚ್ಚಲು ಮತ್ತು ತಡೆಗಟ್ಟಲು ಈ ಕ್ರಮಗಳು ನಿರ್ಣಾಯಕವಾಗಿವೆ ಎನ್ನುತ್ತಾರೆ ಅಧಿಕಾರಿಗಳು.