ಮುಸಲ್ಮಾನರ ಮೇಲಿನ ನನ್ನ ಪ್ರೀತಿಯ ಮಾರ್ಕೆಟಿಂಗ್ ನಾನು ಮಾಡೋದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಹೆಚ್ಚು ಮಕ್ಕಳು ಮಾಡುವವರು ಮತ್ತು ಒಳನುಸುಳುಕೋರರ ಕುರಿತಾದ ಅವರ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದರು. ನಾನು ಕೇವಲ ಮುಸಲ್ಮಾನರ ಕುರಿತು ಮಾತನಾಡಿಲ್ಲ, ಪ್ರತಿಯೊಬ್ಬ ಬಡ ಕುಟುಂಬದ ಪರವಾಗಿ ಮಾತನಾಡಿದ್ದೇನೆ. ಯಾವ ದಿನ ನಾನು ಹಿಂದೂ ಮುಸ್ಲಿಂ ವಿಷಯದ ಕುರಿತು ಮಾತನಾಡುತ್ತೇನೋ ಆಗ ಸಾರ್ವಜನಿಕವಾಗಿ ಜೀವನ ನಡೆಸಲು ನಾನು ಯೋಗ್ಯನಾಗಿರುವುದಿಲ್ಲ ಎಂದು ಹೇಳಿದ್ದಾರೆ.
ಅಧಿಕ ಮಕ್ಕಳನ್ನು ಹೆತ್ತವರು ಎಂಬುದರ ಕುರಿತು ಮಾತನಾಡಿದಾಗ ಅದು ಕೇವಲ ಮುಸಲ್ಮಾನರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಭಾವಿಸಿಕೊಂಡರೆ ಹೇಗೆ ? ಮುಸ್ಲಿಮರಿಗೆ ಏಕೆ ಅನ್ಯಾಯ ಮಾಡುತ್ತೀರಿ ? ನಮ್ಮಲ್ಲಿ ಹಲವಾರು ಬಡ ಕುಟುಂಬಗಳು ಇವೆ. ಅಲ್ಲಿಯೂ ಸಹ ಪರಿಸ್ಥಿತಿ ಹೀಗೆ ಇದೆ. ಯಾವುದೇ ಸಮಾಜವಾಗಲಿ ಎಲ್ಲಿ ಬಡವರು ಅಧಿಕರಿದ್ದಾರೋ ಅಲ್ಲಿ ಮಕ್ಕಳು ಸಹ ಹೆಚ್ಚು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ