- ಸ್ನೇಹಿತರೊಬ್ಬರ ಹುಟ್ಟುಹಬ್ಬ ಆಚರಿಸಿದ ಧೋನಿ
- ಧೋನಿಯ ಈ ಸರಳತೆ ಕಂಡು ಅನೇಕ ನೆಟ್ಟಿಗರಿಂದ ಮೆಚ್ಚುಗೆ
ಭಾರತ ತಂಡದ ಮಾಜಿ ಆಟಗಾರ ಎಂ.ಎಸ್ ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ ಕೆಲವು ವರ್ಷಗಳಾಗಿವೆ. ಕೇವಲ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಧೋನಿ ಎಷ್ಟೇ ದೊಡ್ಡ ಖ್ಯಾತಿ ಗಳಿಸಿದ್ದರೂ ಕೂಡ ತಮ್ಮ ಬಾಲ್ಯದ ಸ್ನೇಹಿತರನ್ನು ಇಂದಿಗೂ ಮರೆತಿಲ್ಲ. ಧೋನಿ ಅವರು ತಮ್ಮ ಸ್ನೇಹಿತರೊಬ್ಬರ ಹುಟ್ಟುಹಬ್ಬ ಆಚರಿಸಿದ ವಿಡಿಯೋವೊಂದು ವೈರಲ್ ಆಗಿದೆ.
ರಾಂಚಿಯಲ್ಲಿರುವ ಧೋನಿ ತಮ್ಮ ಬಾಲ್ಯದ ಗೆಳೆಯನ ಮನೆಯಲ್ಲಿ ಬರ್ತ್ಡೇ ಸೆಲೆಬ್ರೆಷನ್ ಮಾಡಿದ್ದಾರೆ. ಗೆಳೆಯನಿಗೆ ಕೇಕ್ ತಿನ್ನಿಸಿ ಶುಭ ಹಾರೈಸಿದ್ದಾರೆ. ಧೋನಿಯ ಈ ಸರಳತೆಯನ್ನು ಕಂಡು ಅನೇಕ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಎಷ್ಟೇ ದೊಡ್ಡ ಶ್ರೀಮಂತನಾದರೂ ಧೋನಿ ಗೆಳೆಯರನ್ನು ಮರೆತಿಲ್ಲ ಗೆಳೆತನ ಎಂದರೆ ಇದು ಎಂದು ಕಮೆಂಟ್ ಮಾಡಿದ್ದಾರೆ.