ಮುಡಾ ಹಗರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು 50:50 ಅನುಪಾತದ ಸೈಟ್ ಹಂಚಿಕೆ ಮಾದರಿಯ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಅವಧಿಯಿಂದಲೂ (2013-2018) ಈ ಹಂಚಿಕೆ ಪದ್ಧತಿ ಅನುಸರಿಸಲ್ಪಟ್ಟಿದೆ ಎಂದು ತನಿಖೆ ಸಂದರ್ಭದಲ್ಲಿ ವಿವರಗಳು ಹೊರಬಂದಿವೆ. 2016ರಿಂದ ಇಂದಿನವರೆಗೆ ಸೈಟ್ ಹಂಚಿಕೆಯಲ್ಲಿ ಈ ಅನುಪಾತವೇ ಮುಂದುವರಿದಿದೆ ಎಂದು ವರದಿಯಾಗಿದೆ.
2022ರ ಅವಧಿಯಲ್ಲಿ ಮುಡಾದ ಮಾಜಿ ಆಯುಕ್ತ ದಿನೇಶ್ ಅವರು ಕೇವಲ 550 ದಿನಗಳಲ್ಲಿ 812 ಸೈಟ್ಗಳನ್ನು ಹಂಚಿಕೆ ಮಾಡಿದ್ದು, ಪ್ರತಿದಿನ ಮೂಡಾ ಪ್ರದೇಶದಲ್ಲಿ ಅಕ್ರಮಗಳು ನಡೆದಿರುವ ಆರೋಪಗಳು ಎದ್ದುಕಾಣುತ್ತವೆ. ದಿನೇಶ್ ಅವರ ಅವಧಿಯಲ್ಲಿ 50:50 ಸೈಟ್ ಸೀಜ್ (ಹಂಚಿಕೆ) ಪದ್ಧತಿಗೆ ಸಂಪೂರ್ಣ ಸಿದ್ಧತೆ ನಡೆಸಲಾಗಿತ್ತು ಎನ್ನಲಾಗಿದೆ.
ಇದಲ್ಲದೆ, 2016ರಲ್ಲಿ ಮುಡಾ ಆಯುಕ್ತರಾಗಿದ್ದ ಮಹೇಶ್ ಅವರ ಕಾಲಾವಧಿಯಲ್ಲಿ 8 ಸೈಟ್ಗಳು, 2018ರಲ್ಲಿ ಕಾಂತರಾಜು ಅವರ ಅವಧಿಯಲ್ಲಿ 10 ಸೈಟ್ಗಳು, ಮತ್ತು 2020ರಲ್ಲಿ ನಟೇಶ್ ಅವರ ನೇತೃತ್ವದಲ್ಲಿ 58 ಸೈಟ್ಗಳು ಹಂಚಿಕೆಯಾಗಿವೆ. ಈ ಎಲ್ಲಾ ಹಂಚಿಕೆಗಳು 50:50 ಮಾದರಿಯಡಿಯಲ್ಲಿ ನಡೆದಿರುವುದು ತನಿಖೆದಾರರ ವಿವರಣೆಯಲ್ಲಿ ಸ್ಪಷ್ಟವಾಗಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc