ಪ್ರಧಾನಿ ಮೋದಿ, ಅಮಿತ್ ಶಾ ಸೇಡಿನ ರಾಜಕೀಯ ಮಾಡುತ್ತಿದ್ದಾರೆ, ರಾಜ್ಯಪಾಲರ ನಡೆಯ ಹಿಂದೆ ಮೋದಿ, ಅಮಿತ್ ಶಾ ಕೈವಾಡವಿದ್ದು ಸಂವಿಧಾನ ಎತ್ತಿ ಹಿಡಿಯುವ ವ್ಯಕ್ತಿಯಿಂದಲೇ ಸಂವಿಧಾನದ ಕಗ್ಗೊಲೆ ಆಗಿದೆ ಎಂದು ರಾಜ್ಯಪಾಲರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಪಾಲರ ನಡೆ ಇಡೀ ದೇಶದಲ್ಲಿ ಚರ್ಚೆ ಆಗುತ್ತಿದ್ದು ರಾಜಭವನವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ತಿದೆ, ರಾಜ್ಯದಲ್ಲಿ ರಾಜಭವನವೇ ಈಗ ಬಿಜೆಪಿ ಕಚೇರಿಯಾಗಿದೆ ಆದರೆ ರಾಜ್ಯಪಾಲರು ಮೋದಿ, ಶಾ ಕೈಗೊಂಬೆ ಆಗುವುದು ಬೇಡ ಎಂದು ಪ್ರಿಯಾಂಕ್ ಕಿಡಿ ಕಾರಿದ್ದಾರೆ. ಕರ್ನಾಟಕದ ವಿರುದ್ಧ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರ ಹಗೆ ಸಾಧಿಸುತ್ತಿದೆ, ತೆರಿಗೆ ಹಕ್ಕಿಗಾಗಿ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದಕ್ಕೆ ದ್ವೇಷ ಸಾಧನೆ ಮಾಡಿ ಮೋದಿ, ಅಮಿತ್ ಶಾ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ, ನಾವೆಲ್ಲರೂ ಸಿದ್ದರಾಮಯ್ಯ ಅವರ ಜೊತೆಗೆ ಇದ್ದೇವೆ ಕಾನೂನು ಸಮರಕ್ಕೆ ನಾವು ಸಿದ್ದ ಎಂದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.