ಸಾವಿರಾರು ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿ ತಮ್ಮ ಕಿರಿಯ ಮಗನ ಮದುವೆಯನ್ನು ಮಾಡುತ್ತಿದ್ದಾರೆ. ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಬಹಳ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮುಂಬೈನ ಜಿಯೋ ವರ್ಲ್ಡ್ ಸೆಂಟರ್ನಲ್ಲಿ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಗುರು ಹಿರಿಯರ ಸಮ್ಮುಖದಲ್ಲಿ ನಿನ್ನೆ ಸಂಜೆ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಶುಕ್ರವಾರದಿಂದ ಜುಲೈ 14ರವರೆಗೆ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ಮದುವೆ ಕಾರ್ಯಕ್ರಮಗಳು ನಡೆಯಲಿದೆ. ಅಂಬಾನಿ ಕುಟುಂಬದ ವಿವಾಹ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ದೇಶ ವಿದೇಶಗಳಿಂದ ಗಣ್ಯಾತಿಗಣ್ಯರು, ಸೆಲೆಬ್ರಿಟಿಗಳು, ರಾಜಕಾರಣಿಗಳ ಮುಂಬೈ ಆಗಮಿಸಿದ್ದಾರೆ. ಅನಂತ್ ಅಂಬಾನಿ ಮದುವೆಗೆ ಅದೇಷ್ಟೋ ಬಾಲಿವುಡ್ ಸ್ಟಾರ್ಗಳು ಎಂಟ್ರಿ ಕೊಟ್ಟಿದ್ದಾರೆ. ಅಂಬಾನಿ ಹಾಗೂ ರಾಧಿಕಾ ಮದುವೆ ಬಹಳ ಬಾಲಿವುಡ್ ತಾರೆಯರು ಅದ್ಧೂರಿಯಾಗಿ ರೆಡಿಯಾಗಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅದರಲ್ಲೂ ಬಾಲಿವುಡ್ ಬೆಡಗಿ ಆಲಿಯಾ ಭಟ್ ಸುಮಾರು 160 ವರ್ಷ ವಯಸ್ಸಿನ ನೇಯ್ದ ಆಶಾವಲಿ ಸೀರೆಯನ್ನು ಅವರು ಧರಿಸಿದ್ದು ಸಂಪೂರ್ಣವಾಗಿ ಎಥ್ನಿಕ್ ಲುಕ್ನಲ್ಲಿ ಮಿಂಚಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಲಿಯಾ ಭಟ್ ತಮ್ಮ ಪತಿ ರಣಬೀರ್ ಕಪೂರ್ ಅವರೊಂದಿಗೆ ಹೆಜ್ಜೆ ಹಾಕಿದರು. ಆಲಿಯಾ ಭಟ್ ಧರಿಸಿದ್ದ ಈ ಸೀರೆಯನ್ನು ಗುಜರಾತ್ನಲ್ಲಿ ತಯಾರಿಸಲಾಗಿದೆ. ಈ ಸೀರೆಯಲ್ಲಿ ಶುದ್ಧ ರೇಷ್ಮೆ ಮತ್ತು ಝರಿಯನ್ನು ಬಳಸಿ ತಯಾರು ಮಾಡಲಾಗಿದೆ. ಜೊತೆಗೆ ಆಲಿಯಾ ಭಟ್ ಧರಿಸಿದ್ದ ಸೀರೆಯಲ್ಲಿ 6 ಗ್ರಾಂ ಶುದ್ಧ ಚಿನ್ನವನ್ನು ಬಳಸಲಾಗಿದೆ. ಸ್ಟ್ರಾಪ್ಲೆಸ್ ಬ್ಲೌಸ್ನೊಂದಿಗೆ ಜೋಡಿಸಲಾದ ಇದು ರಾಣಿ ಗುಲಾಬಿ ಬಣ್ಣವನ್ನು ಹೊಂದಿದೆ. ಭಾರೀ ಆಭರಣ ಮತ್ತು ನಯವಾದ ಕೇಶವಿನ್ಯಾಸದಿಂದ ಈ ಸೀರೆಯಲ್ಲಿ ಅಲಿಯಾ ಕಂಗೊಳಿಸಿದ್ದರು. ಶುದ್ಧ ರೇಷ್ಮೆ ಮತ್ತು ಶೇ. 99ರಷ್ಟು ಶುದ್ಧ ಬೆಳ್ಳಿಯಿಂದ ಮಾಡಿದ ಝರಿ ಬಾರ್ಡರ್ ಅನ್ನು ಇದು ಹೊಂದಿತ್ತು. ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ಈ ಸೀರೆಯನ್ನು ಡಿಸೈನ್ ಮಾಡಿದ್ದು ಈ ಸೀರೆಯ ನಿಖರವಾದ ಬೆಲೆ 2 ಕೋಟಿ ರೂಪಾಯಿ ಎನ್ನಲಾಗ್ತಿದೆ. ವಜ್ರದ ನೆಕ್ಲೇಸ್ಗೆ ಸಮನಾದ ಕಿವಿಯೋಲೆಗಳು ಹಾಗೂ ಮಾಂಗ್ ಟಿಕಾ ಸೇರಿದಂತೆ ಹಲವು ಆಭರಣಗಳನ್ನು ಧರಿಸಿಕೊಂಡಿದ್ದಾರೆ