ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ, ರಾಯಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ತಮ್ಮ ಮಗಳು ಆರಾಧ್ಯ ಬಚ್ಚನ್ ಜೊತೆಗೆ, ಮದುವೆ ಸಂಭ್ರಮದಲ್ಲಿ ಪಾಲ್ಗೊಂಡ ಐಶ್ವರ್ಯ ರೈ ಬಚ್ಚನ್, ತಮ್ಮದೇ ಆದ ಕಾಸ್ಟ್ಯೂಮ್ ಮತ್ತು ಡ್ರೆಸ್ಸಿಂಗ್ ಸ್ಟೈಲ್ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
ಸೌಂದರ್ಯಕ್ಕೆ ಇನ್ನೊಂದು ಹೆಸರಾಗಿರುವ ಐಶ್ವರ್ಯ ರೈ, ಅಂಬಾನಿ ಮದುವೆಯಲ್ಲಿ ಕೆಂಪು ಬಣ್ಣದ ಔಟ್ಫಿಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಂಪು ಅನಾರ್ಕಲಿ ಸೆಟ್ ನಲ್ಲಿ ಬಂದಿದ್ದ ಐಶ್ವರ್ಯ ರವರು ತುಂಬಾ ಸುಂದರವಾಗಿ ಕಾಣುತ್ತಿದ್ದುದು ಮಾತ್ರವಲ್ಲದೆ ಮಾಡ್ರನ್ ಲುಕ್ ನಲ್ಲಿ ಕೂಡ ಕಾಣುತ್ತಿದ್ದರು. ಅವರು ಧರಿಸಿದ್ದ ರೌಂಡ್ ನೆಕ್ ಜಾಕೆಟ್ ಅವರನ್ನು ಮತ್ತಷ್ಟು ರಾಯಲ್ ಆಗಿ ಕಾಣುವಂತೆ ಮಾಡುತ್ತಿತ್ತು ಮತ್ತು ಗೋಲ್ಡನ್ ಬಾರ್ಡರ್ ಒಳಗೊಂಡ ಔಟ್ಫಿಟ್ ಡ್ರೆಸ್ ಇದಾಗಿತ್ತು.
ಐಶ್ವರ್ಯ ರೈ ಬಚ್ಚನ್ ಧರಿಸಿದ್ದ ಅನಾರ್ಕಲಿ ಫುಲ್ ಸ್ಲೀವ್ ಗಳನ್ನು ಹೊಂದಿ, ಕೆಂಪು ಬಣ್ಣದಿಂದ ಕೂಡಿದ್ದರಿಂದ ಹಬ್ಬದ ಸಂದರ್ಭದಲ್ಲಿ ಹಾಕಿಕೊಳ್ಳುವಂತಹ ಡ್ರೆಸ್ ಇದು ಎನಿಸುವಂತಿತ್ತು.