- ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ 4 ಕೋಟಿ ದೋಚಿದ ಮಹಿಳೆ
- 4 ಕೋಟಿ ದೋಚಿದ ಮಹಿಳೆಯನ್ನು ಬಂಧಿಸಿದ ಪೊಲೀಸರು
ಮುಂಬೈ : ಹೆಣ್ಣು ತನ್ನ ಅಂದವನ್ನೇ ಬಳಸಿಕೊಂಡು ವಂಚಿಸುವ ಪ್ರಕರಣಗಳು ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚುತ್ತಲೇ ಇವೆ. ಇದಕ್ಕೆ ಮುಂಬೈನಲ್ಲಿ ನಡೆದಿರುವ ಘಟನೆಯೊಂದು ಸಾಕ್ಷಿಯಾಗಿದೆ. ಸಹಕಾರಿ ಬ್ಯಾಂಕ್ನ ನಿವೃತ್ತ ಸಿಇಒಗೆ ಮಾನಹಾನಿ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಅವರಿಂದ 4.39 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ಥಾಣೆಯ 45 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ದೂರುದಾರರಾದ ಬ್ಯಾಂಕ್ ಸಿಇಒ ಹೇಳುವಂತೆ, 2016 ರಲ್ಲಿ ತನ್ನ ಬ್ಯಾಂಕ್ನ ವಡಾಲಾ ಶಾಖೆಗೆ ಮಹಿಳೆಯೊಬ್ಬಳು ಲೋನ್ಗಾಗಿ ಬ್ಯಾಂಕ್ಗೆ ಬಂದಿದ್ದಾರೆ. ಈ ಸಮಯದಲ್ಲಿ ನಮ್ಮಿಬ್ಬರ ನಡುವೆ ಪರಸ್ಪರ ಸಂಪರ್ಕದ ಬೆಳೆದಿದೆ ಎಂದು ಹೇಳಿದ್ದಾರೆ.
ಮಹಿಳೆ ಹಣಕಾಸಿನ ತೊಂದರೆಯಿಂದಾಗಿ ಸಾಲದ ಅಗತ್ಯವಿದೆ ಎಂದು ನಿವೃತ್ತ ಸಿಇಒ ಅವರನ್ನು ಸಂಪರ್ಕಿಸಿದ್ದಾರೆ. ಸಾಲ ಪ್ರಕ್ರಿಯೆಯ ಸಮಯದಲ್ಲಿ, ಆಕೆಯ ಮನೆಯ ಸಮೀಕ್ಷೆಯ ಅಗತ್ಯವಿತ್ತು. ಫೆಬ್ರವರಿ 2017 ರಲ್ಲಿ, ಸಿಇಒ ದಾಖಲೆಗಳನ್ನು ಪರಿಶೀಲಿಸಲು ಅವರ ಮನೆಗೆ ಭೇಟಿ ನೀಡಿದಾಗ, ಮಹಿಳೆ ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದುವಂತೆ ಒತ್ತಾಯಿಸಿದಳು ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಿಲಾಗಿದೆ. ನಂತರ ಮಾಸಿಕ 7,300 ರೂ.ಗಳ ಇಎಂಐ ಸಹಿತ 3 ಲಕ್ಷ ರೂ.ಸಾಲ ಮಂಜೂರಾಗಿದೆ.
ಒಂದು ತಿಂಗಳ ನಂತರ, ಮಹಿಳೆ 8 ಕೋಟಿ ರೂಪಾಯಿ ಪಾವತಿಸದಿದ್ದರೆ, ನಿನ್ನ ಕುಟುಂಬ ಮತ್ತು ಸಹೋದ್ಯೋಗಿಗಳಿಗೆ ವಾಟ್ಸಾಪ್ನಲ್ಲಿ ನಿನ್ನ ನಗ್ನ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಾ ವ್ಯಕ್ತಿಯನ್ನು ಬ್ಲ್ಯಾಕ್ಮೇಲ್ ಮಾಡಲು ಪ್ರಾರಂಭಿಸಿದ್ದಾಳೆ. ಆರಂಭದಲ್ಲಿ ಒತ್ತಡಕ್ಕೆ ಮಣಿದು ಸಿಇಒ ಆಕೆಗೆ 5 ಲಕ್ಷ ರೂ ಪಾವತಿಸದ್ದಾನೆ. 2017 ರಿಂದ 2023 ರ ನಡುವೆ ಅವರು 108 ಕಂತುಗಳಲ್ಲಿ ಒಟ್ಟು 4.39 ಕೋಟಿ ರೂ.ಗಳನ್ನು ಪಾವತಿಸಿದ್ದಾನೆ.