- ವಿಮಾನದಲ್ಲಿ ನಿಂತುಕೊಂಡೇ ಪ್ರಯಾಣಿಸಲು ಮುಂದಾದ ಪ್ರಯಾಣಿಕ
- ಮುಂಬೈನಿಂದ ವಾರಾಣಸಿಗೆ ಹೊರಟಿದ್ದಇಂಡಿಗೋ ವಿಮಾನ
ರೈಲು, ಬಸ್ಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬುವುದು ಸಾಮಾನ್ಯವಾಗಿರುತ್ತೆ. ಆದರೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರು ನಿಂತುಕೊಂಡು ಪ್ರಯಾಣಿಸಲು ಮುಂದಾಗಿದ್ದ ಘಟನೆ ಬೆಳಕಿಗೆ ಬಂದಿದೆ. ವಿಮಾನದಲ್ಲಿ ಪ್ರಯಾಣಿಸಲು ಎಷ್ಟು ಆಸನಗಳಿರುತ್ತವೆಯೀ ಅಷ್ಟು ಮಾತ್ರ ಜನರು ಸಂಚರಿಸಲು ಸಾಧ್ಯ.
ಮೇ 21 ರಂದು ಮುಂಬೈನಿಂದ ವಾರಾಣಸಿಗೆ ಹೊರಟಿದ್ದಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರು ನಿಂತುಕೊಂಡಿದ್ದ ದೃಶ್ಯ ಕಂಡುಬಂದಿದೆ. ವಿಮಾನ ಟೇಕ್ ಆಫ್ ಆಗಿತ್ತು. ಪ್ರಯಾಣಿಕ ನಿಂತಿದ್ದನ್ನು ನೋಡಿ ವಿಮಾನ ನಿಲ್ದಾಣಕ್ಕೆ ಇಳಿಸಲಾಯಿತು. ಮುಂಬೈಯಿಂದ ವಾರಣಾಸಿಗೆ ತೆರಳುವ 6ಇ 6543 ವಿಮಾನದ ಪ್ರಯಾಣಿಕರ ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ದೋಷ ಸಂಭವಿಸಿದೆ. ವಿಮಾನದಲ್ಲಿ ನಿಂತಿದ್ದ ಪ್ರಯಾಣಿಕನಿಗೆ ಮೊದಲೇ ಬೇರೋಬ್ಬರು ಆಸನವನ್ನು ನಿಗದಿಪಡಿಸಿದ್ದು ಎಡವಟ್ಟಿಗೆ ಕಾರಣವಾಗಿದೆ.