- ಇನ್ಶುರೆನ್ಸ್ ಕಂಪನಿಗೆ ಚಳ್ಳೆಹಣ್ಣು ತಿನ್ನಿಸಿದ ಫ್ಯಾಮಿಲಿ
- 5 ಇನ್ಶುರೆನ್ಸ್ ಕಂಪನಿಗಳಿಗೆ 70 ಲಕ್ಷ ಪಂಗನಾಮ
ಕುಟುಂಬವೊಂದು 5 ಇನ್ಷೂರೆನ್ಸ್ ಕಂಪನಿಗಳಿಗೆ ಸುಳ್ಳು ದಾಖಲಾತಿಗಳನ್ನು ನೀಡಿ 70 ಲಕ್ಷ ರೂಪಾಯಿ ಹಣ ಕ್ಲೇಮ್ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಕಾಂಚನ ಪೈ, ರೋಹಿತ್ ಪೈ, ಧನರಾಜ್ ಪೈ ಮತ್ತು ಆಶುತೋಷ್ ಯಾದವ್ ಎಂಬ ವೈದ್ಯರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ವಿವಿಧ ಇನ್ಷೂರೆನ್ಸ್ ಕಂಪನಿಗಳಿಂದ ಎರಡು ಹೆಸರುಗಳಲ್ಲಿ ಒಟ್ಟು 1.1 ಕೋಟಿ ಮೊತ್ತಕ್ಕೆ ಇನ್ಷೂರೆನ್ಸ್ ಮಾಡಿಸಲಾಗಿತ್ತು.
ಇನ್ಷೂರೆನ್ಸ್ ಮಾಡಿಸಲಾದ ವ್ಯಕ್ತಿ ಸತ್ತನೆಂದು ಸುಳ್ಳು ದಾಖಲೆ ಸೃಷ್ಟಿಸಿ ಇನ್ಷೂರೆನ್ಸ್ ಕಂಪನಿಯಿಂದ ಪರಿಹಾರ ಪಡೆದು ವಂಚಿಸಿದ್ದಾರೆ. ಒಂದೇ ಕುಟುಂಬಕ್ಕೆ ಸೇರಿದ ಮಹಿಳೆ, ಆಕೆಯ ಪತಿ, ಮಗ, ಮತ್ತೊಬ್ಬ ವೈದ್ಯ ಸೇರಿ ಐಸಿಐಸಿಐ ಪ್ರುಡೆನ್ಷಿಯಲ್, ಮ್ಯಾಕ್ಸ್ ಲೈಫ್, ಭಾರತಿ ಎಎಕ್ಸ್ಎ, ಎಚ್ಡಿಎಫ್ಸಿ ಮತ್ತು ಫ್ಯೂಚರ್ ಜನರಾಲಿ ಎಂಬ ಇನ್ಷೂರೆನ್ಸ್ ಕಂಪನಿಗಳಲ್ಲಿ ವಿಮೆ ಮಾಡಿಸಿ ಸುಳ್ಳು ಕ್ಲೇಮ್ ಮಾಡಿ 70 ಲಕ್ಷ ಹಣ ವಂಚಿಸಿರುವ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.