ಮುಂಬಯಿನ ಮಹಿಳೆಯ ಸಾವಿಗೆ ಕಾರಣವಾದ ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣ ಸಂಬಂಧ ಆರೋಪಿ, ಶಿವಸೇನೆ ನಾಯಕನ ಪುತ್ರ ಮಿಹಿರ್ ಶಾನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ಮಿಹಿರ್ ಶಾನನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.
ಜುಲೈ 7 ರಂದು ಮುಂಬಯಿಯ ಶಿವಸೇನೆ ನಾಯಕನ ಪುತ್ರ ಮಿಹಿರ್ ಶಾ ಬಿಎಂ ಡಬ್ಲ್ಯೂ ಕಾರು ಡಿಕ್ಕಿ ಹೊಡೆಸಿ ಮಹಿಳೆ ಸಾವನ್ನಪ್ಪಿದ್ದರು. ಇದಾದ ಬಳಿಕ ಮಿಹಿರ್ ಅಪಘಾತ ನಡೆದ ಹತ್ತು ಕಿಲೋಮೀಟರ್ ದೂರದಲ್ಲಿ ಕಾರನ್ನು ನಿಲ್ಲಿಸಿ ಕಾರು ಚಾಲಕನಿಗೆ ನೀಡಿ ಪರಾರಿಯಾಗಿದ್ದ. ಇದಾದ ಬಳಿಕ ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಅಪಘಾತದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದ. ಇದಾದ ಬಳಿಕ ಆತನ ಪತ್ತೆಗೆ ಐದು ತಂಡಗಳನ್ನು ರಚಿಸಿದ್ದು, ಅದರಂತೆ ಇಂದು ಮಿಹಿರ್ ನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಪಘಾತಕ್ಕೂ ಸ್ವಲ್ಪ ಸಮಯದ ಹಿಂದೆ ಆರೋಪಿ ಮಿಹಿರ್ ಶಾ, ಜುಹು ಬಳಿಯ ಬಾರ್ಗೆ ತೆರಳಿದ್ದು, ಅಲ್ಲಿ 18,730 ರೂ. ಬಿಲ್ ಮಾಡಿದ್ದಾನೆ ಎನ್ನಲಾಗಿದೆ. ಈ ಬಿಲ್ನ ಪ್ರತಿ ಪೊಲೀ ಸರಿಗೆ ದೊರೆತಿದ್ದು, ಆತ ಮದ್ಯಪಾನ ಮಾಡಿರುವುದಕ್ಕೆ ಈ ಬಿಲ್ ಪುರಾವೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.