ಮುಂಬೈ ಪುಣೆಯ ಲೋನಾವಲಾ ವಲಯದ ಬುಶಿ ಅಣೆಕಟ್ಟಿನ ಸಮೀಪದ ಜಲಪಾತದಲ್ಲಿ ಕೊಚ್ಚಿ ಹೋದ ಐವರ ಶವಗಳು ಸಿಕ್ಕಿವೆ. 4 ವರ್ಷದ ಬಾಲಕನ ಶವವು ಸೋಮವಾರ ಸಂಜೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
16-17 ಮಂದಿ ಭಾನುವಾರ ಮಧ್ಯಾಹ್ನ ಬುಶಿ ಅಣೆಕಟ್ಟಿನ ಸಮೀಪದಲ್ಲಿರುವ ಜಲಪಾತ ನೋಡಲು ಹೋಗಿದ್ದರು. ಆದರೆ ಮಳೆಯ ಆರ್ಭಟ ಹೆಚ್ಚಾಗಿ ಏಕಾಏಕಿ ಜಲಾಶಯದ ಒಳ ಹರಿವು ಹೆಚ್ಚಾಗಿ ದಡಕ್ಕೆ ಬರದೆ ಇರುವ ರೀತಿಯಲ್ಲಿ ಐವರು ಸಿಲುಕಿಕೊಂಡಿದ್ದರು. ಓರ್ವ ಮಹಿಳೆ ಸೇರಿ ನಾಲ್ವರು ಮಕ್ಕಳು ಜಲಾಶಯದ ನೀರಿನ ಸೆಳೆತಕ್ಕೆ ಸಿಲುಕಿ ಒಬ್ಬರನೊಬ್ಬರು ಗಟ್ಟಿಯಾಗಿ ಹಿಡಿದುಕೊಂಡಿದ್ದರು, ನೀರಿನ ರಭಸಕ್ಕೆ ಐವರು ಕೊಚ್ಚಿಹೋದ ಘಟನೆ ಲೋನಾವಲಾದಲ್ಲಿ ನಡೆದಿತ್ತು. ಭಾನುವಾರ ಸಂಜೆ ಐದು ಶವಗಳ ಪೈಕಿ ನಾಲ್ಕು ಶವಗಳನ್ನು ಪತ್ತೆಹಚ್ಚಲಾಗಿತ್ತು. ಆದರೆ 4 ವರ್ಷದ ಬಾಲಕನ ಶವ ಸೋಮವಾರ ಸಂಜೆ ಪತ್ತೆಯಾಗಿದೆ. ಈ ಐದು ಮಂದಿ ಪುಣೆಯ ಹದಪ್ಸರ್ ನಗರದ ಸೈಯದ್ ನಗರದ ನಿವಾಸಿಗಳು ಎಂದು ತಿಳಿದುಬಂದಿದೆ.