- ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ
- ಮುಂಬೈನಲ್ಲಿ ಮತ ಚಲಾಯಿಸಿದ ರಣವೀರ್ ಹಾಗೂ ಡಿಪ್ಪಿ
ಬಾಲಿವುಡ್ ನ ತಾರಾಜೋಡಿ ರಣವೀರ್ ಸಿಂಗ್ ಹಾಗೂ ದೀಪಿಕಾ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸುದ್ದಿ ಸುಂಟರಗಾಳಿ ಎಬ್ಬಿಸಿತ್ತು. ಮದ್ವೆ ಫೊಟೋಗಳನ್ನೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿರೋ ರಣವೀರ್ ಸಿಂಗ್, ಪತ್ನಿ ದೀಪಿಕಾಗೆ ಡಿವೋರ್ಸ್ ಕೊಡ್ತಾರಂತೆ ಎಂದು ನ್ಯೂಸ್ ಆಗಿತ್ತು. ಇದಕ್ಕೆ ರಣವೀರ್ ಸಿಂಗ್ ಆಭರಣ ಮಳಿಗೆಯೊಂದರ ಉದ್ಘಾಟನೆಯ ಸಂದರ್ಭದಲ್ಲಿ ಬಿಗ್ ಬ್ರೇಕ್ ಹಾಕುವ ಕೆಲಸ ಮಾಡಿದ್ದರು. ಇದೀಗ ರಾಮ್ ಲೀಲಾ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ವಿಚ್ಚೇದನದ ಗಾಸಿಪ್ ಸುದ್ದಿಗೆ ಅಂತ್ಯ ಹಾಡಿದ್ದಾರೆ.
ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಒಟ್ಟಿಗೆ ಕಾರಲ್ಲಿ ಬಂದು ವೋಟ್ ಮಾಡಿದ್ದಾರೆ. ಲೋಕಸಭಾ ಚುನಾವಣಾ ಐದನೇ ಹಂತದ ಮತದಾನ ನಡೆದಿದ್ದು, ಮುಂಬೈನಲ್ಲಿ ರಣವೀರ್ ಹಾಗೂ ಡಿಪ್ಪಿ ತಮ್ಮ ಮತ ಚಲಾಯಿಸಿದ್ದಾರೆ. ಫಸ್ಟ್ ಟೈಮ್ ಡಿಪ್ಪಿ ಬೇಬಿ ಬಂಪ್ ಕ್ಯಾಮರಾಗೆ ಸೆರೆಯಾಗಿದ್ದು, ಪದ್ಮಾವತಿ ಫ್ಯಾನ್ಸ್ ಶುಭಹಾರೈಸ್ತಿದ್ದಾರೆ. ರಾಮ್ ಲೀಲಾ ಜೋಡಿ ಮೇಲೆ ಯಾವ ಕೆಟ್ಟ ಕಣ್ಣು ತಾಗದಿರಲಿ, ಈ ಕ್ಯೂಟ್ ಜೋಡಿ ನೂರು ವರ್ಷ ಸುಖವಾಗಿ ಬಾಳಲಿ ಅಂತ ಪ್ರಾರ್ಥಿಸುತ್ತಿದ್ದಾರೆ. ಒಟ್ನಲ್ಲಿ ಜೊತೆಯಾಗಿ ಬಂದ ಡಿಪ್ಪಿ- ವೀರ್, ಡಿವೋರ್ಸ್ ನ್ಯೂಸ್ ಗೆ ಫುಲ್ ಸ್ಟಾಪ್ ಹಾಕಿದ್ದಾರೆ.
ನಿಮಗೆಲ್ಲ ಗೊತ್ತಿರೋ ಹಾಗೇ ರಣವೀರ್ – ಡಿಪ್ಪಿ, ರಾಮ್ಲೀಲಾ, ಬಾಜೀರಾವ್ ಮಸ್ತಾನಿ, ಪದ್ಮಾವತ್ ನಂತಹ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳಲ್ಲಿ ಜೋಡಿಯಾಗಿ ದಿ ಬೆಸ್ಟ್ ಪೇರ್ ಎನಿಸಿಕೊಂಡು ರಿಯಲ್ ಲೈಫ್ನಲ್ಲೂ ಜೋಡಿಯಾದರು. 2018ರಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ ಈ ಜೋಡಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಮುದ್ದು ಕಂದಮ್ಮನ ಆಗಮನಕ್ಕಾಗಿ ಆಸೆಯ ಕಣ್ಗಳಿಂದ ಎದುರುನೋಡ್ತಿದೆ. ಅಂದ್ಹಾಗೇ, ಇಬ್ಬರ ಮನೆಯಲ್ಲೂ ಸಂತಸ-ಸಂಭ್ರಮ ಮನೆಮಾಡಿದ್ದು, ರಾಮ್-ಲೀಲಾ ಮಗುನಾ ಬಾಚಿ ತಬ್ಬಿಕೊಳ್ಳುವುದಕ್ಕೆ, ತೊಟ್ಟಿಲು ಕಟ್ಟಿ ತೂಗೋದಕ್ಕೆ, ಜೋಗುಳ ಹಾಡೋದಕ್ಕೆ ಕಾತುರವಾಗಿದೆ. ಸೆಪ್ಟೆಂಬರ್ ನಲ್ಲಿ ರಾಮ್ ಲೀಲಾ ಮನೆಗೆ ಮೊದಲ ಮಗುವಿನ ಆಗಮನವಾಗ್ತಿದೆ.