- ಪ್ರಜ್ವಲ್ ರೇವಣ್ಣಪ್ರಕರಣದಲ್ಲಿ ಯಾರ ಹಸ್ತಕ್ಷೇಪ, ಒತ್ತಡವಿಲ್ಲ ಎಂದ ಸಿಎಂ
- ಪ್ರಜ್ವಲ ರೇವಣ್ಣ ಕೇಸ್ ನಲ್ಲಿ ನಾನಾಗಲಿ, ಡಿ ಕೆ ಶಿವಕುಮಾರ್ ಆಗಲಿ ಮಧ್ಯೆಪ್ರವೇಶಿಸುತ್ತಿಲ್ಲ, ಪ್ರಭಾವ ಬೀರುತ್ತಿಲ್ಲ.
- ಸಿಬಿಐಗೆ ಬಿಜೆಪಿಯವರು ಕರಪ್ಷನ್ ಬ್ಯೂರೋ ಆಫ್ ಇನ್ವೇಷ್ಟಿಗೇಷನ್ ಅಂತ ಕರೆಯುತ್ತಿದ್ದರು.
ಮೈಸೂರು: ಪ್ರಜ್ವಲ್ ರೇವಣ್ಣಪ್ರಕರಣದಲ್ಲಿ ಯಾರ ಹಸ್ತಕ್ಷೇಪ, ಒತ್ತಡವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಮುಖಂಡ ದೇವರಾಜೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಪ್ರಜ್ವಲ ರೇವಣ್ಣ ಕೇಸ್ ನಲ್ಲಿ ನಾನಾಗಲಿ, ಡಿ ಕೆ ಶಿವಕುಮಾರ್ ಆಗಲಿ ಮಧ್ಯೆಪ್ರವೇಶಿಸುತ್ತಿಲ್ಲ, ಪ್ರಭಾವ ಬೀರುತ್ತಿಲ್ಲ, ತನಿಖೆಯ ಹಾದಿ ತಪ್ಪಿಸುತ್ತಲೂ ಇಲ್ಲ ಎಂದರು. ನಮ್ಮ ಅಧಿಕಾರಿಗಳ ಮೇಲೆ ನಮಗೆ ನಂಬಿಕೆಯಿದೆ. ಕಾನೂನಿನಡಿ ಎಸ್ ಐಟಿ ರಚನೆ ಮಾಡಿದ್ದೇವೆ. ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣ ತನಿಖೆ ಪ್ರಕರಣದಲ್ಲಿ ಸೂಕ್ತ ತನಿಖೆ ಮಾಡಿ ವರದಿ ನೀಡುತ್ತಾರೆ. ಈ ಹಿಂದೆ ಸಿಬಿಐಗೆ ನೀಡಿದ್ದ ಡಿ ಕೆ ರವಿ ಕೇಸು ಏನಾಯಿತು, ಇಂದು ಸಿಬಿಐ ತನಿಖೆಗೆ ವಹಿಸಿ ಎಂದು ಒತ್ತಾಯ ಮಾಡುವವರು ಹಿಂದೆ ಟೀಕೆ ಮಾಡಿದ್ದರು. ಇದೇ ಸಿಬಿಐಗೆ ಬಿಜೆಪಿಯವರು ಕರಪ್ಷನ್ ಬ್ಯೂರೋ ಆಫ್ ಇನ್ವೇಷ್ಟಿಗೇಷನ್ ಅಂತ ಕರೆಯುತ್ತಿದ್ದರು ಎಂದು ಅಸಮಾಧಾನ ಹೊರಹಾಕಿದರು.