ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಟಿಕೆಟ್ ವಂಚಿತರಾಗಿ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಕಾರಣಕ್ಕೆ ಪಕ್ಷದಿಂದ ಬಿಜೆಪಿ ಹಿರಿಯ ನಾಯಕರ ರಘುಪತಿ ಭಟ್ ಅವರನ್ನು ಉಚ್ಚಾಟನೆ ಮಾಡಿದ್ದಾರೆ. ರಘುಪತಿ ಭಟ್ ಅವರ ಪರವಾಗಿ ಮೈಸೂರು- ಕೊಡುಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಧ್ವನಿ ಎತ್ತಿದ್ದಾರೆ. ಪ್ರಸ್ತುತದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿರುವ ಪ್ರತಾಪ್ ಸಿಂಹ, ಸಮಾನದುಃಖಿಯ ಪರ ಬೆಂಬಲಕ್ಕೆ ನಿಂತಿರುವುದು ಕುತೂಹಲ ಮೂಡಿಸಿದೆ.
ಹಿಜಾಬ್ ವಿಚಾರವಾಗಿ ಉಂಟಾಗಿದ್ದ ವಿವಾದವನ್ನು ಪ್ರಸ್ತಾಪಿಸಿದ್ದ ಉಡುಪಿಯ ವಿದ್ಯಾರ್ಥಿನಿ ಅಲಿಯಾ ಅಸ್ಸಾದಿ. ಉಚ್ಚಾಟನೆಗೊಂಡಿರುವ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಟೀಕಿಸಿರುವ ಸಂಗತಿ ಬಗ್ಗೆ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ಹಿಂದುತ್ವವಾದಿಗಳಿಗೆ ಬಂದಿರುವ ದುರದೃಷ್ಟಕರ ಪರಿಸ್ಥಿತಿ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ಮೂಲ ಕಾರ್ಯಸೂಚಿಯಾದ ಹಿಂದುತ್ವದ ಪರ ಹೋರಾಡಿದವರ ಪರವಾಗಿ ಪಕ್ಷ ನಿಲ್ಲುವುದಿಲ್ಲ ಎಂಬ ಕಾರ್ಯಕರ್ತರ ಆರೋಪಗಳನ್ನು ಪ್ರತಾಪ್ ಸಿಂಹ ಪ್ರತಿಧ್ವನಿಸಿದ್ದಾರೆ. ಅದೇ ವೇಳೆ ರಘುಪತಿ ಭಟ್ ಅವರಿಗೆ ಎಂಎಲ್ಎ ಹಾಗೂ ಎಂಎಲ್ಸಿ ಟಿಕೆಟ್ ಕೂಡ ಸಿಗದೆ ಇರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.