ನಾಗ ಚೈತನ್ಯ-ಶೋಭಿತಾ ಡಿಸೆಂಬರ್ 4 ರಂದು ಮದುವೆ ಆಗ್ತಿದ್ದಾರೆ. ಹಿರಿಯರು ಮಹೂರ್ತ ಫಿಕ್ಸ್ ಮಾಡಿದ್ದಾರೆ. ಬಂಧುಗಳು, ಆಪ್ತರ, ಪ್ರಮುಖರಿಗೆ ಮದುವೆ ಕಾರ್ಡ್ಗಳನ್ನು ಕೊಡ್ತಿದ್ದಾರೆ. ವೆಡ್ಡಿಂಗ್ ಕಾರ್ಡ್ ಜೊತೆಗೆ ಉಡುಗೊರೆಗಳನ್ನು ನೀಡುತ್ತಿದ್ದು, ನಾಗ ಚೈತನ್ಯ-ಶೋಭಿತಾ ಮದುವೆ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮದುವೆ ಕಾರ್ಡ್ನಲ್ಲಿರುವ ಹೆಸರುಗಳು ಚರ್ಚೆಯ ವಿಷಯವಾಗಿವೆ. ವರ ನಾಗ ಚೈತನ್ಯ ತಾಯಿ ಜೊತೆಗೆ ಮಲತಾಯಿ, ಮಲತಂದೆಯ ಹೆಸರುಗಳಿವೆ. ನಾಗ ಚೈತನ್ಯ, ಅಕ್ಕಿನೇನಿ ನಾಗಾರ್ಜುನ ಮತ್ತು ಅಮಲ ಅವರ ಪುತ್ರ ಎಂದು ಬರೆದಿದ್ದಾರೆ. ಕೆಳಗೆ ಶರತ್ ವಿಜಯರಾಘವನ್ ಮತ್ತು ಲಕ್ಷ್ಮೀ ಕಮಲ ಎಂದು ಮುದ್ರಿಸಲಾಗಿದೆ. ನಾಗ ಚೈತನ್ಯಗೆ ಅಮಲ ಮಲತಾಯಿ, ಶರತ್ ಮಲತಂದೆ. ಕಾರ್ಡ್ನಲ್ಲಿ ಎಎನ್ಆರ್ ದಂಪತಿಗಳು, ಡಿ. ರಾಮಾನಾಯುಡು ದಂಪತಿಗಳ ಹೆಸರುಗಳು ಇವೆ.
ಶೋಭಿತಾ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ಬಹಳ ದಿನಗಳಿಂದ ಶುರುವಾಗಿವೆ. ಆ ಫೋಟೋಗಳನ್ನು ಶೋಭಿತಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ‘ಗೋಧುಮ ರಾಯಿ ಅರಶಿನ ತಯಾರಿ’ ಎಂದು ಶೀರ್ಷಿಕೆ ನೀಡಿದ್ದಾರೆ. ಹಿಂದೂ ವಿವಾಹ ಸಂಪ್ರದಾಯದಲ್ಲಿ ಅರಶಿನ ತಯಾರಿ ಮುಖ್ಯ ಆಚರಣೆ. ಇದರೊಂದಿಗೆ ಶೋಭಿತಾ-ನಾಗ ಚೈತನ್ಯ ಮದುವೆ ಕಾರ್ಯಕ್ರಮಗಳು ಶುರುವಾಗಿವೆ ಎಂದು ತಿಳಿದುಬರುತ್ತದೆ.
ವಿಶಾಖಪಟ್ಟಣದಲ್ಲಿ ಮದುವೆ ನಡೆಯಲಿದೆಯಂತೆ. ಅಲ್ಲೇ ಮದುವೆ ಸಿದ್ಧತೆಗಳು ನಡೆಯುತ್ತಿವೆಯಂತೆ. ಶೋಭಿತಾ ವಿಶಾಖಪಟ್ಟಣದಲ್ಲಿ ಓದಿದ್ದು ವಿಶೇಷ. ಎರಡು ವರ್ಷಗಳಿಗೂ ಹೆಚ್ಚು ಕಾಲ ನಾಗ ಚೈತನ್ಯ-ಶೋಭಿತಾ ರಿಲೇಷನ್ಶಿಪ್ನಲ್ಲಿದ್ದರು. ಆಗಾಗ್ಗೆ ಇವರ ಖಾಸಗಿ ಫೋಟೋಗಳು ಸೋರಿಕೆಯಾಗುತ್ತಿದ್ದವು. ಪ್ರೇಮ ವದಂತಿಗಳನ್ನು ಈ ಜೋಡಿ ಹಲವು ಬಾರಿ ನಿರಾಕರಿಸಿದ್ದರು. ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡು ಅಚ್ಚರಿ ಮೂಡಿಸಿದರು. ನಾಗಾರ್ಜುನ ಹೊಸ ಸೊಸೆ ಶೋಭಿತಾ ಧೂಳಿಪಾಲ ಅವರನ್ನು ಅಕ್ಕಿನೇನಿ ಕುಟುಂಬಕ್ಕೆ ಸ್ವಾಗತಿಸಿದರು.
ಶೋಭಿತಾ-ನಾಗ ಚೈತನ್ಯ ಮದುವೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಒಟ್ಟಾರೆಯಾಗಿ ಪ್ರೇಮಿಗಳಾಗಿದ್ದ ಈ ಸೆಲೆಬ್ರಿಟಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.