ಎರಡು ದಿನಗಳ ಕಾಲ ಗ್ರೀನ್ ಲೈನ್ ಮೆಟ್ರೋ ತಪಾಸಣೆ ನಡೆಯಲಿದೆ. ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿ ಹಾಗೂ ಪೀಣ್ಯ ಇಂಡಸ್ಟ್ರಿ ನಿಲ್ದಾಣ ಸೇರಿದಂತೆ ಇಂದು ಒಟ್ಟು ನಾಲ್ಕು ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಇರಲಿದೆ. ಆದರೆ ಪೀಣ್ಯ ಇಂಡಸ್ಟ್ರಿ ಟು ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋ ಸಂಚಾರ ಇರಲಿದೆ.
ಇಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಕಂಡುಬರಲಿದೆ. ರೈಲ್ವೆ ಸುರಕ್ಷತಾ ಆಯುಕ್ತರು ನಾಗಸಂದ್ರ-ಮಾದವಾರ ಹೊಸ ಮಾರ್ಗದಲ್ಲಿ ಸುರಕ್ಷತಾ ತಪಾಸಣೆ ನಡೆಸುತ್ತಿರುವುದರಿಂದ ಇಂದು (ಅಕ್ಟೋಬರ್ 03) ಹಸಿರು ಮಾರ್ಗದಲ್ಲಿ ನಾಗಸಂದ್ರ-ಪೀಣ್ಯ ಇಂಡಸ್ಟ್ರಿ ನಿಲ್ದಾಣ ನಡುವೆ ಸಂಚಾರ ವ್ಯತ್ಯಯ ಉಂಟಾಗಲಿದೆ.
ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿ ಹಾಗೂ ಪೀಣ್ಯ ಇಂಡಸ್ಟ್ರಿ ನಿಲ್ದಾಣ ಸೇರಿದಂತೆ ಇಂದು ಒಟ್ಟು ನಾಲ್ಕು ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಇರಲಿದೆ. ಎರಡು ದಿನಗಳ ಕಾಲ ಗ್ರೀನ್ ಲೈನ್ ಮೆಟ್ರೋ ತಪಾಸಣೆ ನಡೆಯಲಿದೆ. ಇಂದು ಸತತ ನಾಲ್ಕು ಗಂಟೆಗಳ ಕಾಲ ಮೆಟ್ರೋ ಪ್ರಯಾಣಿಕರಿಗೆ ಸಮಸ್ಯೆ ಆಗಲಿದೆ.
ನಾಗಸಂದ್ರ ಮತ್ತು ಮಾದವಾರ ನಿಲ್ದಾಣಗಳ ನಡುವಿನ ಹೊಸ ಮಾರ್ಗವನ್ನು ಮೆಟ್ರೋ ರೈಲ್ವೆ ಸುರಕ್ಷತ ಆಯುಕ್ತರಿಂದ ಶಾಸನಬದ್ಧ ಸುರಕ್ಷತಾ ತಪಾಸಣೆ ನಡೆಸುತ್ತಿರುವುದರಿಂದ, 3ನೇ ಅಕ್ಟೋಬರ್ 2024 ರಂದು ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಕಾರ್ಯಾಚರಣೆಯಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಬದಲಾವಣೆಯಾಗಲಿದೆ.