ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರವನ್ನು ಶುದ್ಧೀಕರಿಸುತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿಷ್ಟಾಚಾರಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು, ಪ್ರತಿಪಕ್ಷಗಳ ಮೈತ್ರಿಕೂಟ ಸರ್ಕಾರ ರಚಿಸಿದರೆ ಅದನ್ನು ಸರಿಪಡಿಸಲಾಗುವುದು ಎಂದು ಪಟೋಲೆ ಹೇಳಿದ್ದಾರೆ.
ಶಂಕರಾಚಾರ್ಯರು ಪ್ರಾಣಪತ್ರಿಷ್ಢೆಯನ್ನು ವಿರೋಧಿಸಿದ್ದರು. ಆ ಸ್ಥಳದಲ್ಲಿ ರಾಮ ದರ್ಬಾರ್ ಸ್ಥಾಪಿಸಲಾಗುವುದು. ಇದು ರಾಮನ ವಿಗ್ರಹವಲ್ಲ. ಆದರೆ ರಾಮ್ ಲಲ್ಲಾನ ಮಗುವಿನ ರೂಪ ಎಂದು ಕಾಂಗ್ರೆಸ್ ನಾಯಕ ಹೇಳಿದರು. ರಾಮ ಮಂದಿರ ನಿರ್ಮಾಣದಲ್ಲಿ ನರೇಂದ್ರ ಮೋದಿ ಶಿಷ್ಟಾಚಾರಕ್ಕೆ ವಿರುದ್ಧವಾಗಿ ವರ್ತಿಸಿದ್ದಾರೆ. ನಾವು ಅದನ್ನು ತಿದ್ದುಪಡಿ ಮತ್ತು ಧರ್ಮದ ಮೂಲಕ ಮಾಡುತ್ತೇವೆ ಎಂದು ಹೇಳಿದರು.