‘ನಾನೇನು ದೇವರಲ್ಲ. ಮನುಷ್ಯ, ತಪ್ಪು ಆಗುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕನ್ನಡಿಗ ಉದ್ಯಮಿ ನಿಖಿಲ್ ಕಾಮತ್ ಅವರ ‘ಡಬ್ಲ್ಯುಟಿಎಫ್’ ಪೋಡ್ಕಾಸ್ಟ್ನಲ್ಲಿ ಮಾತನಾಡಿದ ಅವರು ಈ ಮಾತು ಹೇಳಿದ್ದಾರೆ. ಅಲ್ಲದೆ, ಇದು ಪ್ರಧಾನಿ ಮೋದಿ ಅವರ ಮೊದಲ ಪೋಡ್ಕಾಸ್ಟ್ ಕೂಡ ಆಗಿದೆ. ಇದರ ಟ್ರೇಲರ್ ಅನ್ನು ಕಾಮತ್ ಟ್ವಿಟರಲ್ಲಿ ಬಿಡುಗಡೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಜನರನ್ನ ತಲುಪಲು ಹಲವಾರು ವೇದಿಕೆಗಳನ್ನ ಬಳಸಿಕೊಂಡಿದ್ದಾರೆ. ತಮ್ಮ ನೆಚ್ಚಿನ ರೇಡಿಯೋ ಮೂಲಕ ದೇಶದ ಜನರನ್ನ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ತಲುಪಿದ್ದರು. ನಂತರ ಸಾಕಷ್ಟು ಬಾರಿ ವಿವಿಧ ವೇದಿಕೆಗಳ ಮೂಲಕ ಜನರನ್ನ ತಲುಪಿದ್ದಾರೆ. ಆದರೆ ಈ ಬಾರಿ ಪ್ರಧಾನಿ ಮೋದಿಯವರು ಪೋಡ್ಕಾಸ್ಟ್ ಮೂಲಕ ಜನರನ್ನ ತಲುಪುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಶಾಕಿಂಗ್ ಮಾತನ್ನಾಡಿದ್ದಾರೆ. ನಾನು ತಪ್ಪು ಮಾಡಿದ್ದೇನೆ ಎಂದಿದ್ದೇಕೆ ಮೋದಿ ಗೊತ್ತಾ..? ತಪ್ಪು ಮಾಡೋದು ಸಹಜ .. ನಾವೇನು ದೇವರಾ.? ಮನುಷ್ಯರು ತಪ್ಪು ಮಾಡೋದು ಸಹಜ. ನಾನೂ ಕೂಡ ಹಿಂದೆ ತಪ್ಪು ಮಾಡಿದ್ದೇನೆ. ನಾನೂ ಕೂಡ ಮನುಷ್ಯ.. ದೇವರಲ್ಲ.! ಎಂದು ಪ್ರಧಾನಿ ನರೇಂದ್ರ ಮೋದಿ ಅಚ್ಚರಿ ಮಾತುಗಳನ್ನಾಡಿದ್ದಾರೆ. ನಿಖಿಲ್ ಕಾಮತ್ ಸಂದರ್ಶನದಲ್ಲಿ ಮೋದಿ ಹೇಳಿಕೆ ನೀಡಿದ್ದು, ಕನ್ನಡಿಗ ನಿಖಿಲ್ ಕಾಮತ್ ಪೋಡ್ ಕ್ಯಾಸ್ಟ್ ನಲ್ಲಿ ಮೋದಿ ಭಾಗವಹಿಸಿದ್ದರು. ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಪೋಡ್ ಕ್ಯಾಸ್ಟ್ನಲ್ಲಿ ಮಾನತಾಡಿದ್ದಾರೆ.
ಕಾಮತ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೋದಿ, ‘ನಾನು ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ನಲ್ಲಿ ಮಾಡಿದ ಭಾಷಣದಲ್ಲಿ ‘ನಾನು ಕೂಡ ತಪ್ಪು ಮಾಡುತ್ತೇನೆ’ ಎಂದು ಜನರಿಗೆ ಹೇಳಿದ್ದೆ. ಏಕೆಂದರೆ ನಾನು ಮನುಷ್ಯ, ದೇವರಲ್ಲ’ ಎಂದು ಹೇಳಿದರು.. ಇನ್ನು, ‘ರಾಜಕೀಯಕ್ಕೆ ಹೋಗಬೇಡಿ. ಕೆಟ್ಟದ್ದು ಎಂದು ನಮ್ಮ ಮನೆಯವರು ನನಗೆ ಹೇಳುತ್ತಿದ್ದರು’ ಎಂದು ಕಾಮತ್ ಕೇಳಿದಾಗ, ‘ನೀವು ಆ ಮಾತನ್ನು ನಂಬಿದ್ದೇ ಆದಲ್ಲಿ ನನ್ನೆದುರು ಇಂದು ಕೂತು ಮಾತಾಡುತ್ತಿರಲಿಲ್ಲ’ ಎಂದು ಚಟಾಕಿ ಹಾರಿಸಿದರು.
ಇದಲ್ಲದೆ, ‘ಭಾರತ ಯಾವತ್ತೂ ಯುದ್ಧದ ವೇಳೆ ತಟಸ್ಥವಾಗಿಲ್ಲ. ಶಾಂತಿಯ ಪಕ್ಷಪಾತಿ’ ಎಂದ ಮೋದಿ, ‘ಮೊದಲ ಸಲ ಪ್ರಧಾನಿ ಆಗಿದ್ದಾಗ ನಾನು ದಿಲ್ಲಿ ಅರ್ಥ ಮಾಡಿಕೊಳ್ಳುವಲ್ಲಿ ಸಮಯ ಕಳೆದೆ’ ಎಂದರು. ತಮ್ಮ ಹಿಂದಿ ಬಗ್ಗೆ ಪ್ರೀತಿ ಬಗ್ಗೆ ಪೋಡ್ಕಾಸ್ಟಲ್ಲಿ ಮೋದಿ ಮಾತನಾಡಿದ್ದಾರೆ. ಈ ನಡುವೆ, ಮೋದಿ ‘ಈ ಪೋಡ್ ಕಾಸ್ಟ್ ಎಂಜಾಯ್ ಮಾಡಿ’ ಎಂದು ಟ್ವಿಟಿಸಿದ್ದಾರೆ.