ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ರೆಜಿಲ್ನಲ್ಲಿ ಹಿಂದೂ ಸಂಪ್ರದಾಯದಂತೆ ವೇದ ಘೋಷಗಳ ಜೊತೆಗೆ ಭಾರತೀಯ ಸಂಸ್ಕೃತಿಯಂತೆ ನೃತ್ಯದ ಮೂಲಕ ಭವ್ಯವಾದ ಸ್ವಾಗತ ನೀಡಲಾಯಿತು.
ರಿಯೊ ಡಿ ಜನೈರೊದಲ್ಲಿ, ವೈದಿಕ ವಿದ್ವಾಂಸರ ಗುಂಪು, ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ ಸಾಮರಸ್ಯದಿಂದ ಸಂಸ್ಕೃತ ಶ್ಲೋಕಗಳನ್ನು ಪಠಿಸಿದರು. ಮೋದಿಯವರ ಮೂರು ರಾಷ್ಟ್ರಗಳ ಭೇಟಿಯ ಎರಡನೇ ಹಂತ ಇದಾಗಿದ್ದು, ಈ ಸಂದರ್ಭದಲ್ಲಿ ಅವರು ಜಿ20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಬಗ್ಗೆ ಪ್ರಧಾನಿ ತಮ್ಮ ಎಕ್ಸ್ನಲ್ಲಿ ಪೋಸ್ಟ್ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ರಿಯೊ ಡಿ ಜನೈರೊಗೆ ಆಗಮಿಸಿದ ನಂತರ ಭಾರತೀಯ ಸಮುದಾಯದಿಂದ ಆತ್ಮೀಯ ಮತ್ತು ಉತ್ಸಾಹಭರಿತ ಸ್ವಾಗತದಿಂದ ನನಗೆ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯ ಪ್ರಕಾರ, ಬ್ರೆಜಿಲ್ನಲ್ಲಿ ಭಾರತದ ಸಂಸ್ಕೃತಿ, ಧರ್ಮ, ಪ್ರದರ್ಶನ ಕಲೆಗಳು ಮತ್ತು ತತ್ವಶಾಸ್ತ್ರದಲ್ಲಿ ಗಮನಾರ್ಹ ಆಸಕ್ತಿ ಇದೆ. ರಾಮಕೃಷ್ಣ ಮಿಷನ್, ಇಸ್ಕಾನ್, ಸತ್ಯಸಾಯಿ ಬಾಬಾ ಚಳುವಳಿ, ಮಹರ್ಷಿ ಮಹೇಶ್ ಯೋಗಿ ಅವರ ಅನುಯಾಯಿಗಳು ಮತ್ತು ಭಕ್ತಿ ವೇದಾಂತ ಫೌಂಡೇಶನ್ನಂತಹ ಸಂಸ್ಥೆಗಳು ಬ್ರೆಜಿಲ್ನಾದ್ಯಂತ ಸಕ್ರಿಯ ಅಧ್ಯಾಯಗಳನ್ನು ಹೊಂದಿವೆ. ಭಾರತೀಯ ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯು ಬ್ರೆಜಿಲ್ನೊಂದಿಗೆ ಪ್ರತಿಧ್ವನಿಸಲು ಭಾರತೀಯ ಸಂಸ್ಕೃತಿಯ ಆರಂಭಿಕ ಅಂಶಗಳಲ್ಲಿ ಇದು ಒಂದಾಗಿದೆ ಎಂದು ತಿಳಿಸಿದೆ.
ನೈಜೀರಿಯಾ ಭೇಟಿಯೊಂದಿಗೆ ಆರಂಭವಾದ ಮೂರು ರಾಷ್ಟ್ರಗಳ ಪ್ರವಾಸದ ಎರಡನೇ ಹಂತದ ಭಾಗವಾಗಿ ಪ್ರಧಾನಿ ಮೋದಿ ಸೋಮವಾರ ಬ್ರೆಜಿಲ್ಗೆ ಆಗಮಿಸಿದರು. ರಿಯೊ ಡಿ ಜನೈರೊದಲ್ಲಿ ರಾಯಭಾರಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ಭಾರತೀಯ ಪ್ರತಿನಿಧಿಗಳು ಅವರನ್ನು ಸ್ವಾಗತಿಸಿದರು. 19ನೇ ಜಿ20 ನಾಯಕರ ಶೃಂಗಸಭೆಯು ಬ್ರೆಜಿಲ್ನಲ್ಲಿ ನ.18 ರಿಂದ 19ರವರೆಗೆ ನಡೆಯಲಿದೆ. ಜಿ20 ಶೃಂಗಸಭೆಯಲ್ಲಿ ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ಸೇರಿವೆ. ನ.18-19ರಂದು ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಯುಎಸ್ ಅಧ್ಯಕ್ಷ ಜೋ ಬೈಡನ್ ಭಾಗಿಯಾಗಲಿದ್ದಾರೆ.