ನೀವು ಯಾವ ದೇಶದಲ್ಲಿ ಅತೀ ದೊಡ್ಡ ಚಿನ್ನದ ಗಣಿ ಇದೆ. ಅತೀ ಹೆಚ್ಚು ಕಚ್ಚಾ ತೈಲದ ನಿಕ್ಷೇಪವಿದೆ ಎಂದರೆ ಸೌದಿ ಅರೇಬಿಯಾ, ಇರಾನ್, ಇರಾಕ್ ಹೆಸರು ಹೇಳಬಹುದು. ಏಕೆಂದರೆ ಇಲ್ಲಿ ಹೆಚ್ಚಿನ ಕಚ್ಚಾ ತೈಲ ಇವೆ. ಇನ್ನು ಚಿನ್ನ ವಜ್ರದ ಗಣಿಯಲ್ಲಿ ಹಲವು ದೇಶಗಲ್ಲಿ ಕಂಡುಬರುತ್ತೆ. ಆದರೆ ಇದೆಲ್ಲಾ ಒಂದಲ್ಲಾ ಒಂದು ದಿನ ಮುಗಿದು ಹೋಗುವ ಆಸ್ತಿಗಳಾಗಿವೆ.
ಆದ್ರೆ ಈಗ ಪತ್ತೆಯಾಗಿರುವ ಆಸ್ತಿಯೊಂದು ಭೂಮಿ ಮೇಲಿನ ಪ್ರತಿಯೊಬ್ಬನನ್ನು ಕೋಟ್ಯಧಿಪತಿಯನ್ನಾಗಿ ಮಾಡಲಿದೆ. ಇದು ತಮಾಷೆಯ ವಿಷಯ ಅಲ್ಲವೇ ಅಲ್ಲ. ಇದನ್ನ ಹೇಳುತ್ತಿರೋದು ನಾಸಾ. ಭೂ ಮಂಡಲದಲ್ಲಿ ಪತ್ತೆಯಾಗಿರುವ ಕ್ಷುದ್ರಗಹಗದಲ್ಲಿ ಇಡೀ ಭೂಮಿ ಮೇಲಿನ ಜನರಿಗೆ ಹಂಚಬಹುದಾದಷ್ಟು ಸಂಪತ್ತು ಇಟ್ಟುಕೊಂಡಿದೆಯಂತೆ.
16 ಸೈಕ್ ಎಂದು ಹೆಸರಿಸಲ್ಪಟ್ಟ, ಈ ತೇಲುವ ಚಿನ್ನದ ಗಣಿಯು 1852 ರಲ್ಲಿ ಇಟಾಲಿಯನ್ ಖಗೋಳಶಾಸ್ತ್ರಜ್ಞ ಅನ್ನಿಬೇಲ್ ಡಿ ಗ್ಯಾಸ್ಪಾರಿಸ್ ಅವರಿಂದ ಕಂಡುಹಿಡಿಯಲ್ಪಟ್ಟಿದೆ. 16 ಸೈಕ್ ಎಂದರೆ ಗ್ರೀಕ್ ದೇವತೆಯ ಹೆಸರಂತೆ, ಈ ಕ್ಷುದ್ರಗ್ರಹದಲ್ಲಿ ಇಷ್ಟೊಂದು ಪ್ರಮಾಣದ ಸಂಪತ್ತು ಹೊಂದಿದೆಯಂತೆ. 16 ಸೈಕ್ ಕ್ಷುದ್ರಗ್ರಹದಲ್ಲಿ ಕಬ್ಬಿಣ, ನಿಕಲ್, ಚಿನ್ನ ಸೇರಿ ವಿವಿಧ ರೀತಿಯ ಲೋಹಗಳು ತುಂಬಿಕೊಂಡಿದೆಯಂತೆ. ಅಂದಾಜು 10 ಕ್ವಿಂಟಿಲಿಯನ್ ಯುಎಸ್ ಡಾಲರ್ ಮೌಲ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಭೂಮಿ ಮೇಲಿರುವ ಪ್ರತಿಯೊಬ್ಬರಿಗೂ ಈ ಹಣ ಹಂಚಿದರೆ ಅವರು ಕೋಟ್ಯಧಿಪತಿಗಳಾಗಬಹುದು.
ಇನ್ನೊಂದು ಅಚ್ಚರಿ ಎಂದರೆ ಈ 16 ಸೈಕ್ ಕ್ಷುದ್ರಗ್ರಹವು ಭೂಮಿಗಿಂತ ಹಾಗೂ ಸೂರ್ಯನಿಗಿಂತ ಮೂರು ಪಟ್ಟು ದೂರದಲ್ಲಿದೆ. ಮಂಗಳ ಹಾಗೂ ಗುರು ಗ್ರಹದ ನಡುವಿನ ಕಕ್ಷೆಯಲ್ಲಿ ಸುತ್ತುತ್ತಿದೆ ಎಂದು ತಿಳಿದುಬಂದಿದೆ. ಇಡೀ ಕ್ಷುದ್ರಗ್ರಹದಲ್ಲಿ ಇಂತಹ ಸಂಪತ್ಭರಿತ ಲೋಹಗಳ ಬಿಟ್ಟರೆ ಬೇರೆ ಏನು ಇಲ್ಲವಂತೆ.
ಇನ್ನು ಚಂದ್ರನ ಮೇಲೆ ಇಳಿದಿರುವ ಮಾನವ ಈ ಸೈಕ್ ಕುದ್ರಗ್ರಹ ತಲುಪುವ ಆಲೋಚನೆ ಮಾಡದೆ ಇರುತ್ತಾನಾ? ನಾಸಾ 2023ರಲ್ಲಿ ಮಾನವ ರಹಿತ ನೌಕೆಯನ್ನು ಉಡಾವಣೆ ಸಹ ಮಾಡಿತ್ತು. ಈ ನೌಕೆ ಸುಮಾರು 2029ರ ವೇಳೆಗೆ ಈ ಕ್ಷುದ್ರಗ್ರಹದ ಗುರುತ್ವಾಕರ್ಷಣಾ ವಲಯಕ್ಕೆ ಪ್ರಯಾಣಿಸಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಈ ನೌಕೆಯು 2031ರ ವರೆಗೆ ಈ ಕ್ಷುದ್ರಗ್ರಹವನ್ನು ಸುತ್ತುವರೆಯಲಿದೆ. ಈ ಸೈಕ್ ಮಿಷನ್ಗಾಗಿ ನಾಸಾ ಸುಮಾರು 1.2 ಶತಕೋಟಿ ಡಾಲರ್ ಅನ್ನು ಮೀಸಲಿಟ್ಟಿದೆ. ಈ ಗ್ರಹದ ಕುರಿತ ಅಧ್ಯಯನ ನಡೆಸುತ್ತಲೇ ಬಂದಿದೆ.
ಆದರೆ ಈ ಕ್ಷುದ್ರಗ್ರಹದಲ್ಲಿ ಗಣಿಗಾರಿಕೆ ಮಾಡುವ ಉದ್ದೇಶವನ್ನು ನಾಸಾ ಹೊಂದಿಲ್ಲ ಎಂದು ತಿಳಿಸಿದೆ. ಅಲ್ಲದೆ ಈ ಗ್ರಹದಲ್ಲಿರುವ ಸಂಪತ್ತನ್ನು ಭೂಮಿಗೆ ತರುವ ಆಲೋಚನೆಯನ್ನೂ ಸಹ ಮಾಡಿಲ್ಲವಂತೆ. ಆದರೆ ಇಷ್ಟೊಂದು ಪ್ರಮಾಣದ ಸಂಪತ್ತು ಹೇಗೆ ಶೇಖರಣೆಯಾಗಿದೆ. ಅದಕ್ಕೆ ಕಾರಣ ಏನಿರಬಹುದು ಎಂಬುದನ್ನು ಅಧ್ಯಯನ ಮಾಡಲಿದೆ. ಒಂದು ವೇಳೆ ಈ ಕ್ಷುದ್ರಗ್ರಹವನ್ನು ಭೂಮಿಯ ಕಡೆಗೆ ಬರುವಂತೆ ಮಾಡಿದರೆ ಅಲ್ಲಿರುವ ಲೋಹದ ಗಣಿಗಾರಿಗೆ ಸಾಧ್ಯವಾಗಬಹುದು. ಭೂಮಿ ಮೇಲಿನ ಎಲ್ಲಾ ಲೋಹಗಳು, ಗಣಿಗಳು ಖಾಲಿಯಾದ ಬಳಿಕ ಮಾನವ ಭೂಮಿ ಹೊರಗಿನ ಕ್ಷುದ್ರಗ್ರಹದಿಂದಲೇ ಲೋಹಗಳ ಗಣಿಗಾರಿಕೆ ಆರಂಭಿಸಬೇಕಾಗಬಹುದು. ಭವಿಷ್ಯದಲ್ಲಿ ನಾಸಾ ಇದೇ ಪ್ರಯತ್ನ ಮಾಡಬಹುದು.