ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶರೋನ್ ರಾಜ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ವಿಷ ಹಾಕಿ ಪ್ರಿಯಕರನನ್ನು ಕೊಲೆ ಮಾಡಿದ್ದ ಗ್ರೀಷ್ಮಾಗೆ ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್ 2022ರಲ್ಲಿ ವಿಷ ಪ್ರಾಶನದಿಂದ ಹತ್ಯೆಯಾಗಿದ್ದ.
ಆಸ್ಪತ್ರೆಯಲ್ಲಿ ಸಾಯುವ ಮುನ್ನ ತನ್ನ ಸಂಬಂಧಿಕರಲ್ಲಿ ತನ್ನ ಪ್ರೇಯಸಿ ಗ್ರೀಷ್ಮಾ ವಿಷ ಹಾಕಿದ್ದಾಗಿ ಹೇಳಿದ್ದ. ಪೊಲೀಸ್ ವಿಚಾರಣೆ ವೇಳೆ ಗ್ರೀಷ್ಮಾ ಶರೋನ್ ರಾಜ್ಗೆ ವಿಷ ಹಾಕಿದ್ದಾಗಿ ಒಪ್ಪಿಕೊಂಡಿದ್ದಳು. ಕಳೆದ ಶುಕ್ರವಾರ (ಜ.17) ಗ್ರೀಷ್ಮಾ ಅಪರಾಧಿ ಎಂದು ತೀರ್ಪು ನೀಡಿದ್ದ ನ್ಯಾಯಾಲಯ, ಜ.20ಕ್ಕೆ ಶಿಕ್ಷೆಯನ್ನು ಕಾಯ್ದಿರಿಸಿತ್ತು.
2022ರಲ್ಲಿ ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್ ಎಂಬಾತನ ಹತ್ಯೆಯಾಗಿತ್ತು. ವಿಷ ಪ್ರಾಶನದಿಂದ ಶರೋನ್ ರಾಜ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಸಾಯುವ ಮುನ್ನ ತನ್ನ ಸಂಬಂಧಿಕರಲ್ಲಿ ತನ್ನ ಪ್ರೇಯಸಿ ಗ್ರೀಷ್ಮಾ ವಿಷ ಹಾಕಿದ್ದಾಗಿ ಹೇಳಿದ್ದ. ಪೊಲೀಸ್ ವಿಚಾರಣೆ ವೇಳೆ ಗ್ರೀಷ್ಮಾ ಶರೋನ್ ರಾಜ್ಗೆ ವಿಷ ಹಾಕಿದ್ದಾಗಿ ಒಪ್ಪಿಕೊಂಡಿದ್ದಳು.
2022ರ ಅಕ್ಟೋಬರ್ 14ರಂದು ಶರೋನ್ ರಾಜ್ನನ್ನು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ರಾಮವರ್ಮಂಚಿರೈನಲ್ಲಿರುವ ತಮ್ಮ ಮನೆಗೆ ಕರೆಸಿಕೊಂಡಿದ್ದ ಗ್ರೀಷ್ಮಾ, ಆತನಿಗೆ ಕ್ರಿಮಿನಾಶಕ ಕುಡಿಸಿದ್ದಳು. ಬಳಿಕ ಆತ ವಾಂತಿ ಮಾಡಿಕೊಂಡು ಅಸ್ವಸ್ಥನಾಗಿದ್ದು, ತನ್ನ ಸ್ನೇಹಿತರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದ.
ಶರೋನ್ ರಾಜ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ 2022ರ ಅಕ್ಟೋಬರ್ 31ರಂದು ಆತ ಕೊನೆಯುಸಿರೆಳೆದಿದ್ದ. ಸಾಯುವ ಕೊನೆಯ ಕ್ಷಣದಲ್ಲಿ ಐಸಿಯು ಬೆಡ್ನಲ್ಲಿದ್ದ ಶರೋನ್ ರಾಜ್, ಗ್ರೀಷ್ಮಾ ಬಗ್ಗೆ ಹೇಳಿದ್ದ. ಆಕೆಯೇ ನನಗೆ ವಿಷ ಹಾಕಿದ್ದಾಳೆ ಅಂತ ಸಂಬಂಧಿಕರು, ಕುಟುಂಬಸ್ಥರ ಮುಂದೆ ಹೇಳಿಕೆ ನೀಡಿದ್ದ.
ಗ್ರೀಷ್ಮಾ ಹಾಗೂ ಶರೋನ್ ರಾಜ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕುಟುಂಬಸ್ಥರು ಆಕೆಯ ವಿವಾಹವನ್ನು ಯೋಧನೊಬ್ಬನೊಂದಿಗೆ ಫಿಕ್ಸ್ ಮಾಡಿದ್ರಂತೆ. ಇದೇ ಕಾರಣಕ್ಕೆ ಗ್ರೀಷ್ಮಾ ಶರೋನ್ ರಾಜ್ನಿಂದ ದೂರವಾಗಲು ನಿರ್ಧರಿಸಿದ್ದಳು.
ಈ ಪ್ರಕರಣದಲ್ಲಿ ಗ್ರೀಷ್ಮಾ, ಆಕೆ ತಾಯಿ ಸಿಂಧು ಹಾಗೂ ಚಿಕ್ಕಪ್ಪ ನಿರ್ಮಲ್ ಕುಮಾರ್ ನಾಯರ್ ಬೇಲ್ ಪಡೆದಿದ್ದರು. ಇದೀಗ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್, ಸಿಂಧುವನ್ನು ದೋಷಮುಕ್ತಗೊಳಿಸಿದೆ. ಗ್ರೀಷ್ಮಾ ಹಾಗೂ ನಿರ್ಮಲ್ ಕುಮಾರ್ ಅಪರಾಧಿಗಳೆಂದು ತೀರ್ಪು ನೀಡಿದೆ. ನಾಳೆ ಇಬ್ಬರಿಗೂ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ https://whatsapp.com/channel/0029VafyCqRFnSzHn1JWKi1B