ದೇಶದಲ್ಲಿ ಮಾದಕ ವಸ್ತುಗಳ ನಿಗ್ರಹಕ್ಕೆಂದೇ ಕೇಂದ್ರ ಸರ್ಕಾರ ಆರಂಭಿಸಿರುವ ಪ್ರತ್ಯೇಕ ಸಹಾಯವಾಣಿ ́1933́ ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಚಾಲನೆ ನೀಡಿದರು ಹಾಗೂ ದೇಶದಲ್ಲಿ 1 ಗ್ರಾಂ ಡ್ರಗ್ಸ್ ಪ್ರವೇಶಕ್ಕೂ ಅವಕಾಶ ನೀಡಲ್ಲ ಎಂದು ಗುಡುಗಿದರು. ಈ ಸಹಾಯವಾಣಿ ಸಂಖ್ಯೆ ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ. ಯಾವುದೇ ವ್ಯಕ್ತಿ ಮಾದಕ ವಸ್ತುಗಳಿಗೆ ಸಂಬಂಧಿಸಿದ ದೂರು, ಸಲಹೆ ಹಾಗೂ ಮಾಹಿತಿಗಳನ್ನು ಇದರಲ್ಲಿ ಹಂಚಿಕೊಳ್ಳಬಹುದು. ಇದಕ್ಕೆ ಕರೆ ಮಾಡಿದವರ ಮಾಹಿತಿಯನ್ನು ಗುಪ್ತವಾಗಿ ಇಡಲಾಗುತ್ತದೆ.
ಇದರೊಂದಿಗೆ info.ncbmanas@ gov.in ಇ-ಮೇಲ್ ವಿಳಾಸ ಹಾಗೂ ncbmanas.gov.in ವೆಬ್ಸೈಟ್ಗಳನ್ನು ಉದ್ಘಾಟಿಸಿದರು. ಸಾರ್ವಜನಿಕರು ಇದರಲ್ಲಿ ಯಾವುದಕ್ಕಾದರೂ ಮಾದಕ ವಸ್ತು ಮಾರಾಟ, ಖರೀದಿ, ಸರಬರಾಜು ಇತ್ಯಾದಿ ದೂರುಗಳನ್ನು ಕಳುಹಿಸಬಹುದಾಗಿದೆ.