ಜೈಪುರ : ಭಾರತೀಯ ವಾಯುಪಡೆಯ ಕಣ್ಗಾವಲು ವಿಮಾನವೊಂದು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಪತನಗೊಂಡಿದೆ. ಇದು ಮಾನವರಹಿತ ವಿಮಾನವಾದ ಕಾರಣ ಸಾವು – ನೋವು ಸಂಭವಿಸಿಲ್ಲ. ವಿಮಾನವು ಜಮೀನಿನಲ್ಲಿ ಪತನಗೊಂಡಿದ್ದು ಯಾವುದೇ ಅವಘಡ ಸಂಭವಿಸಿಲ್ಲ. ಆದರೆ ಇಡೀ ವಿಮಾನವು ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ವಾಯುಪಡೆಯೇ ಮಾಹಿತಿ ನೀಡಿದೆ.