ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನವನ್ನು ಈ ವರ್ಷ ಯಾರು ಪಡೆಯಬಹುದು ಎಂಬ ಕುತೂಹಲ ಹೆಚ್ಚಿದೆ .ಈ ವರ್ಷದ ಭಾರತ ರತ್ನ ಪುರಸ್ಕೃತರಲ್ಲಿ ಉನ್ನತ ರಾಜಕಾರಣಿಗಳಿರಬಹುದು ಎಂದು ಹೇಳಲಾಗಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ಬಿಡುಗಡೆಯಾಗುವ ಪಟ್ಟಿಯಲ್ಲಿ ಅಚ್ಚರಿಯ ಹೆಸರುಗಳು.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಯಾರಿಗೆ ಸಿಗಲಿದೆ ಎನ್ನುವುದರ ಬಗ್ಗೆ ಕುತೂಹಲ ಹೆಚ್ಚಿದೆ.ಕಳೆದ ವರ್ಷ ನಿಧನರಾದ ಉದ್ಯಮಿ ರತನ್ ಟಾಟಾ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ತಿಳಿದುಬಂದಿದೆ. ಭಾರತ ರತ್ನ ನೀಡಲು ಯಾವುದೇ ದಿನಾಂಕದ ಬಾಧ್ಯತೆ ಇಲ್ಲ. ಆದರೆ ಜ.25ರಂದು ಪದ್ಮ ಪ್ರಶಸ್ತಿಗಳ ಪ್ರಕಟಣೆವೇಳೆ ಘೋಷಣೆ ಆಗಬಹುದು ಎಂಬ ಆಶಾಭಾವನೆ ಹಲವರಿಗೆ ಇದೆ.
ಆಗ್ರಹಜೋರು: ಟಾಟಾ ಮತ್ತು ಸಿಂಗ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎನ್ನುವ ಕೂಗು ಜೋರಾಗಿದೆ. ಅಕ್ಟೋಬರ್ನಲ್ಲಿ ಕೈಗಾರಿಕೋದ್ಯಮಿ ರತನ್ ಟಾಟಾನಿಧನದ ಬಳಿಕ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎನ್ನುವ ಆಗ್ರಹ ಜೋರಾಗಿತ್ತು. ಅಲ್ಲದೇ ಮಹಾರಾಷ್ಟ್ರ ಸಂಪುಟ ಕೂಡ ನಿರ್ಣಯವನ್ನು ಅಂಗೀಕರಿಸಿತ್ತು. ಕಳೆದ ಡಿ. 26ರಂದು ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಭಾರತ ರತ್ನ ಗೌರವನೀಡಬೇಕೆಂದುಕಾಂಗ್ರೆಸ್ ಆಗ್ರಹಿಸಿತ್ತು. ಇದರ ಜೊತೆಗೆ ದಲಿತ ನಾಯಕ, ಬಿಎಸ್ಪಿ ಸಂಸ್ಥಾಪಕ ಕಾನ್ನಿ ರಾಮ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ.
ಸಾವರ್ಕರ್ ಸೇರಿ ಹಲವರ ಹೆಸರು.. ಇದರ ಜೊತೆಗೆ ಮುಲಾಯಂ ಸಿಂಗ್ ಯಾದವ್, ವಿಡಿ ಸಾವರ್ಕರ್, ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ, ಬಿಹಾರದ ಮೊದಲ ಸಿಎಂ ಶ್ರೀ ಕೃಷ್ಣ ಸಿಂಗ್, ಬಿ.ಪಿ ಮಂಡಲ್, ಬಿಜು ಪಟ್ನಾಯಕ್, ಬಾಳಾ ಠಾಕ್ರೆ ಅವರ ಹೆಸರುಗಳೂ ಇದೆ ಎನ್ನಲಾಗಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc