40-55ರ ವಯೋಮಾನದವರಲ್ಲಿ ವಯೋಸಹಜವಾಗಿ ಕಾಣಿಸಿಕೊಳ್ಳುವ ಸಮೀಪದ ದೃಷ್ಟಿದೋಷ ನಿವಾರಿಸುವ ಔಷಧವೊಂದನ್ನು ಮೊದಲ ಬಾರಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಅಕ್ಟೋಬರ್ಗೆ ಮಾರುಕಟ್ಟೆಗೆ ಬರಲಿದೆ.
ಮುಂಬೈನ ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ಖಾಸ ಗಿ ಕಂಪನಿ ʻಪ್ರೆಸ್ವುʼ ಎಂಬ ಐಡ್ರಾಪ್ ಅಭಿವೃದ್ಧಿಪಡಿಸಿದ್ದು, ಇದರ ಮಾರಾಟಕ್ಕೆ ಔಷಧ ನಿಯಂತ್ರಣ ಸಂಸ್ಥೆ ಅನುಮತಿ ನೀಡಿದೆ. ಇದಕ್ಕೆ 350 ರುಪಾಯಿ ದರ ನಿಗದಿಪಡಿಸಲಾಗಿದೆ. ಐ ಡ್ರಾಪ್ನ ಒಂದು ಹನಿ ಕೇವಲ 15 ನಿಮಿಷದಲ್ಲಿ ಕೆಲಸ ನಿರ್ವಹಿಸುವುದಕ್ಕೆ ಪ್ರಾರಂಭಿಸುತ್ತದೆ. ಇದರ ಪರಿಣಾಮ 6 ಗಂಟೆಗಳ ತನಕವೂ ಇರಲಿದೆ ಎಂದು ಕಂಪನಿ ಹೇಳಿದೆ.