ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಭೀಕರ ಅಫಘಾತ ಸಂಭವಿಸಿದ್ದು, ಕಾರ್ನಲ್ಲಿದ್ದ ಎಲ್ಲಾ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಂಗಳೂರಿನ ಹೆದ್ದಾರಿಯಲ್ಲಿ 2 ಲಾರಿ, 2 ಕಾರು ಹಾಗೂ ಸ್ಕೂಲ್ ಬಸ್ನ ನಡುವೆ ಅಪಘಾತವಾಗಿದೆ. ಇದರಲ್ಲಿ KA 01 ND 1536 ನಂಬರ್ನ ವೋಲ್ವೋ ಕಾರ್ನಲ್ಲಿದ್ದ 6 ಮಂದಿ ಅಪ್ಪಚ್ಚಿಯಾಗಿ ಮೃತಪಟ್ಟಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಈ ಹಂತದಲ್ಲಿ ಕಂಟೇನರ್ ಲಾರಿಯೊಂದು ತನ್ನ ಎದುರಿಗಿದ್ದ ವಾಹನಕ್ಕೆ ಗುದ್ದಿ ಪಲ್ಟಿಯಾಗಿದೆ. ಈ ಹಂತದಲ್ಲಿ ಕಂಟೇನರ್ ಲಾರಿಯ ಪಕ್ಕದಲ್ಲಿಯೇ ಇದ್ದ ವೋಲ್ವೋ ಕಾರ್ನ ಮೇಲೆ ಇದು ಉರುಳಿಬಿದ್ದಿದ್ದು, 6 ಜನ ಮೃತಪಟ್ಟಿದ್ದಾರೆ.
ಮೃತ 6 ಜನರಲ್ಲಿ ಮಹಾರಾಷ್ಟ್ರ ಮೂಲದ ಚಂದ್ರಮ್ ಯಗಪಗೋಲ್ ಕೂಡ ಸೇರಿದ್ದಾರೆ. IAST ಸಾಫ್ಟ್ವೇರ್ ಸಲ್ಯೂಷನ್ನ ಎಂಡಿ, ಸಿಇಒ ಆಗಿ ಚಂದ್ರಮ್ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆಟೋಮೋಟಿವ್, ಎಂಬೆಡೆಡ್ ಸಾಫ್ಟ್ವೇರ್ ಡೆವಲ್ಪಮೆಂಟ್ನಲ್ಲಿ ಅನುಭವ ಹೊಂದಿದ್ದ ಚಂದ್ರಮ್, ಕೇವಲ ಎರಡು ತಿಂಗಳ ಹಿಂದೆಯಷ್ಟೇ ಹೊಸ ಕಾರ್ ಖರೀದಿಸಿದ್ದರು.
18 ವರ್ಷಗಳಿಂದ ಈ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಚಂದ್ರಮ್, ಎಲೆಕ್ಟ್ರಿಕ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಸುರತ್ಕಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಹೊಂದಿದ್ದಾರೆ.