ಮೈಸೂರು ನಂಜನಗೂಡು ಬ್ರಿಟೀಷರು ನಮಗೆ ಸ್ವಾತಂತ್ರ್ಯ ನೀಡಿ ದೇಶ ಬಿಟ್ಟು ಹೋಗುವ ಮುನ್ನ ಮಠಗಳು ಜಾತಿ ಭೇದ ಮಾಡದೇ ಎಲ್ಲರಿಗೂ ಶಿಕ್ಷಣವನ್ನು ನೀಡಿದ್ದರಿಂದ ಕರ್ನಾಟಕ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಇಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಮಹಾಸಂಸ್ಥಾನ ಮಠದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಒಂದು ಮಠ ಅಂದರೆ ಸಂಸ್ಕೃತಿಯ ಕೇಂದ್ರ. ಮೈಸೂರು ಭಾಗದಲ್ಲಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಸಂಸ್ಕೃತಿಯನ್ನು ಆಳವಾಗಿ ಬೇರೂರುವಂತೆ ಮಾಡಿದ್ದಾರೆ.
ಇದೊಂದು ಸುಸಂಸ್ಕೃತ ನಾಡಾಗಿದ್ದರೆ, ಪ್ರಗತಿಪರ ನಾಡಾಗಿದ್ದರೆ, ಶಿಕ್ಷಣದಲ್ಲಿ ಮುಂದುವರೆದ ನಾಡಾಗಿದ್ದರೆ, ಅಷ್ಟೇ ಅಲ್ಲ ಐಟಿ ಬಿಟಿಯಲ್ಲಿ ಸಾಧನೆ ಮಾಡಬೇಕೆಂದರೆ ಅದೆಲ್ಲಕ್ಕೂ ಮೂಲ ಮಠಗಳು ಕಾರಣ. ಬ್ರಿಟೀಷರು ನಮಗೆ ಸ್ವಾತಂತ್ರ್ಯ ನೀಡಿ ದೇಶ ಬಿಟ್ಟು ಹೋಗುವ ಮುನ್ನ ಮಠಗಳು ಜಾತಿ ಭೇದ ಮಾಡದೇ ಎಲ್ಲರಿಗೂ ಶಿಕ್ಷಣವನ್ನು ನೀಡಿದ್ದರಿಂದ ಕರ್ನಾಟಕ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಎಲ್ಲಿ ಸರ್ಕಾರ ಕೆಲಸ ಮಾಡಿಲ್ಲವೋ ಅಲ್ಲಿ ಮಠಮಾನ್ಯಗಳು ಕೆಲಸ ಮಾಡಿವೆ. 1925 ರಲ್ಲಿ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ತೆರೆದು ಶಿಕ್ಷಣ ನೀಡಿವೆ. ಸುತ್ತೂರಿನಿಂದ ಹಿಡಿದು ನಿಪ್ಪಾಣಿವರೆಗೂ, ಬೀದರನಿಂದ ಹಿಡಿದು ಚಾಮರಾಜನಗರದವರೆಗೆ ಎಲ್ಲ ಕಡೆಯೂ ಮಠಗಳ ಸಾಧನೆ ಮತ್ತು ಸುತ್ತಲಿನ ಕ್ಷೇತ್ರದ ಅಭಿವೃದ್ಧಿ ಕಾಣಿಸುತ್ತದೆ. ಮಠಗಳು ಧರ್ಮ, ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿಕೊಳ್ಳುವುದರ ಜೊತೆಗೆ ಜ್ಞಾನವನ್ನು ನಾಡಿಗೆ ಕೊಟ್ಟಿವೆ ಎಂದರು.
ಮನುಷ್ಯನಿಗೆ ಅಗತ್ಯವಿರುವಂಥದ್ದು ದೇವರು ಕೊಟ್ಟಿರುವ ಬಿಸಿಲು, ಗಾಳಿ, ಅದರ ಜೊತೆಗೆ ಕೃಷಿ ಬಹಳ ಮುಖ್ಯವಾಗಿದೆ. ಸುತ್ತೂರು ಮಠ ತನ್ನ ಸಂಸ್ಕಾರದಲ್ಲಿ ಕೃಷಿಯನ್ನು ಸೇರಿಸಿದೆ. ನೇರವಾಗಿ ಮನುಷ್ಯನನ್ನು ಮಾನವನನ್ನಾಗಿ ಮಾಡಿ ಹಸಿವನ್ನು ನೀಗಿಸುವಂಥದ್ದು, ಕಾರ್ಯವನ್ನು ಕೃಷಿಯಲ್ಲಿ ಸುತ್ತೂರು ಮಠ ಮಾಡುತ್ತ ಬಂದಿದೆ. ಪರಮಪೂಜ್ಯರು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಬರವನ್ನು ನೀಗಿಸುವಂತಹ ಮಹೋನ್ನತ್ತ ಕೆಲಸವನ್ನು ಮಾಡುತ್ತ ಬಂದಿದ್ದಾರೆ ಎಂದರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc