ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಶುರುವಾಗಿ ಇನ್ನೂ ಒಂದು ವಾರ ಕೂಡ ಕಳೆದಿಲ್ಲ. ಆದರೆ ಈ ಮಧ್ಯೆ ಸ್ಪರ್ಧಿಗಳ ಮಧ್ಯೆ ಲವ್ ಶುರುವಾಗಿರೋ ಹಾಗಿದೆ. ಹೌದು, ಕನ್ನಡದ ದೊಡ್ಡ ಶೋ ಬಿಗ್ಬಾಸ್ ಶುರುವಾಗಿ ಐದು ದಿನಗಳು ಕಳೆದಿವೆ.
ಈಗಾಗಲೇ ನರಕ ವಾಸಿಗಳು ಹಾಗೂ ಸ್ವರ್ಗ ವಾಸಿಗಳ ಮಧ್ಯೆ ವೈಮನಸ್ಸು ಮೂಡಿದೆ. ಆದರೆ ಈ ಮಧ್ಯೆ ಸ್ಯಾಂಡಲ್ವುಡ್ ನಟ ಧರ್ಮ ಕೀರ್ತಿರಾಜ್ ಹಾಗೂ ಸೀರಿಯಲ್ ನಟಿ ಐಶ್ವರ್ಯ ಸಿಂಧೋಗಿ ನಡುವೆ ಸಣ್ಣ ಲವ್ ಮೂಡಿದ ಹಾಗಿದೆ. ಕಲರ್ಸ್ ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಪ್ರೋಮೋವೊಂದು ರಿಲೀಸ್ ಮಾಡಲಾಗಿದೆ.
ಹೊಸ ಪ್ರೋಮೋದಲ್ಲಿ ನಟಿ ಐಶ್ವರ್ಯ ಸಿಂಧೋಗಿ ಧರ್ಮ ಅವರ ಬಗ್ಗೆ ಮಾತಾಡಿದ್ದಾರೆ. ಧರ್ಮ ಅವರೇ ನಿಮ್ಮ ಬಗ್ಗೆ ನನಗೆ ತುಂಬಾ ಇಂಪ್ರೆಸ್ ಆಗಿದ್ದು ಏನೆಂದರೆ, ತುಂಬಾ ಸಾಫ್ಟ್ ಆಗಿ ಮಾತಾಡ್ತಿರಾ, ಹಣ್ಣುಗನ್ನು ತುಂಬಾ ಮುದ್ದಾಗಿ ಕಟ್ ಮಾಡ್ತೀರಾ, ನಾನು ಯಾವಾಗ ಫುಲ್ ಬಿದ್ದೋದೆ ಅಂದ್ರೆ ಅಂತಾ ಹೇಳುತ್ತಾರೆ. ಆಗ ಅಲ್ಲೇ ಕುಳಿತುಕೊಂಡಿದ್ದ ಸಹ ಸ್ಪರ್ಧಿಗಳು ಫುಲ್ ಶಾಕ್ ಆಗಿದ್ದಾರೆ. ಅಬ್ಬಬ್ಬಾ ಏನೋ ನಡೀತಾ ಇದೆ ಅಂತ ಮಾತಾಡಿಕೊಳ್ಳುತ್ತಿದ್ದಾರೆ.