- ಪಂತ್ ಅವರ ಯುಟ್ಯೂಬ್ ಚಾನೆಲ್ಗೆ 1 ಲಕ್ಷ ಸಬ್ಸ್ಕ್ರೈಬರ್ಸ್
- ರಿಷಭ್ ಪಂತ್ಗೆ ಯುಟ್ಯೂಬ್ ಕಡೆಯಿಂದ ಸಿಲ್ವರ್ ಪ್ಲೇ ಬಟನ್
ನ್ಯೂಯಾರ್ಕ್: ಟೀಮ್ ಇಂಡಿಯಾದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆದಂತಹ ರಿಷಭ್ ಪಂತ್ ಆಕ್ಸಿಡೆಂಟ್ನಿಂದ ಚೇತರಿಸಿಕೊಂಡು ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇದರ ನಡುವೆ ಪಂತ್ ಅವರ ಯುಟ್ಯೂಬ್ ಚಾನೆಲ್ವೊಂದನ್ನು ಹೊಂದಿದ್ದು, 1 ಲಕ್ಷ ಸಬ್ಸ್ಕ್ರೈಬರ್ಸ್ ಆಗಿದ್ದಾರೆ. ಈ ಹಿನ್ನೆಲೆ ಫೂಲ್ ಹ್ಯಾಪಿ ಆಗಿರುವ ಅವರಿಗೆ ಯುಟ್ಯೂಬ್ ಕಡೆಯಿಂದ ಸಿಲ್ವರ್ ಪ್ಲೇ ಬಟನ್ ಸಿಕ್ಕಿದೆ. ನಿಮ್ಮೆಲ್ಲರ ಪ್ರೀತಿ ನನ್ನ ಮೇಲೆ ಸದಾ ಹೀಗೆ ಇರಲಿ ಎಂದು ಧನ್ಯವಾದ ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ಪಂತ್ ಅವರ ಫಾರ್ಮ್ ವಿಚಾರವಾಗಿ ಮಾತನಾಡೋದಾದರೆ ಟಿ20 ವಿಶ್ವಕಪ್ನಲ್ಲಿ ರಿಷಭ್ ಪಂತ್ ಇದುವರೆಗೆ 96 ರನ್ ಗಳಿಸಿದ್ದಾರೆ. ಅವರು ಪಾಕಿಸ್ತಾನ್ ವಿರುದ್ಧ 31 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ಪಂತ್ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಐರ್ಲೆಂಡ್ ವಿರುದ್ಧ 36 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಇದಲ್ಲದೆ, ಅಮೆರಿಕ ವಿರುದ್ಧ 20 ಎಸೆತಗಳಲ್ಲಿ 18 ರನ್ ಕೊಡುಗೆ ನೀಡಿದ್ದರು.
ರಿಷಭ್ ಪಂತ್ ಈ ಹಿಂದೆ ಐಪಿಎಲ್ ಟೈಮ್ನಲ್ಲಿ ತಮ್ಮ ಅಧಿಕೃತ ಯುಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ್ದರು. 1 ತಿಂಗಳೊಳಗೆ ಈ ಚಾನೆಲ್ಗೆ 1 ಲಕ್ಷ 20 ಸಾವಿರ ಫಾಲೋವರ್ಸ್ ಆಗಿದ್ದಾರೆ. ಈ ಹಿನ್ನಲೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪಂತ್, ಯುಟ್ಯೂಬ್ ಚಾನೆಲ್ನಿಂದ ಬರುವ ಎಲ್ಲಾ ಆದಾಯವನ್ನು ಜನಪರ ಕಾರ್ಯಕ್ಕಾಗಿ ಉಪಯೋಗಿಸುತ್ತೇನೆ. ದಾನ ಧರ್ಮ ಮಾಡತ್ತೇನೆ ಎನ್ನುವ ಮೂಲಕ ರಿಷಭ್ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಿಷಬ್ ಪಂತ್ ಭಾರತಕ್ಕೆ ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇಲ್ಲಿಯವರೆಗೆ ಅವರು ಅತ್ಯುತ್ತಮ ಫಾರ್ಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸೂಪರ್-8 ಸುತ್ತಿನ ಪಂದ್ಯಗಳಲ್ಲೂ ರಿಷಭ್ ಪಂತ್ ಕಡೆಯಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.