ʻಟೈಟಾನಿಕ್ʻ ʻಅವತಾರ್ʻ ನಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಿಸಿ ಜನಪ್ರಿಯತೆ ಗಳಿಸಿದ್ದ ನಿರ್ಮಾಪಕ ಜಾನ್ ಲ್ಯಾಂಡೋ ಶನಿವಾರ ನಿಧನರಾಗಿದ್ದಾರೆ. ಲ್ಯಾಂಡೋ ಸಾವಿಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಜುಲೈ 23, 1960ರಂದು ನ್ಯೂಯಾರ್ಕ್ ನಲ್ಲಿ ಜನಿಸಿದ ಲ್ಯಾಂಡೋ, ಚಲನಚಿತ್ರ ನಿರ್ಮಾಪಕರೊಬ್ಬರ ಮಗ. 1980ರಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಅವರ ವೃತ್ತಿ ಜೀವನ ಆರಂಭಿಸಿದ ಆವರು ಆ ನಂತರ ನಿರ್ದೇಶಕ ಕ್ಯಾಮರೂನ್ ಅವರ ಜೊತೆಗೂಡಿ ʻ ಟೈಟಾನಿಕ್ʻ ಚಿತ್ರ ನಿರ್ಮಿಸಿದರು.
ಕ್ಯಾಮರೂನ್ ಮತ್ತು ಲ್ಯಾಂಡೋ ಅವರ ಪಾಲುದಾರಿಕೆಯಲ್ಲಿ ತೆರೆಗೆ ಬಂದ ಮೂರು ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದವು. 1997ರಲ್ಲಿ ತೆರೆಕಂಡ ʻ ಟೈಟಾನಿಕ್ʻ ಚಿತ್ರ 11 ಆಸ್ಕರ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿತ್ತು. 2009ರಲ್ಲಿ ಬಿಡುಗಡೆಯಾದ ʻಅವತಾರ್ʻ ಮತ್ತು ಇತ್ತೀಚೆಗೆ ತೆರೆ ಕಂಡ ಅದರ ಸೀಕ್ವೆಲ್ ʻ ಅವತಾರ್ ದ ವೇ ಆಫ್ ವಾಟರ್ʻ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದವು.